ರಾಮದುರ್ಗ: ತಾಲೂಕಿನ ಸುರೇಬಾನ ಎಸ್ ಎಫ್ ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಶಾಲಾ ಫಲಿತಾಂಶವೂ ಶೇಕಡ ನೂರರಷ್ಟು ಆಗಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕುಮಾರಿ ಸಂಜನಾ ಮಳಲಿ 95.84 % ಪ್ರಥಮ ಸ್ಥಾನ, ಕುಮಾರಿ ಪೂರ್ಣಿಮಾ ಗೋಕಾವಿ 95.04 % ದ್ವಿತೀಯ, ಹಾಗೂ ಕುಮಾರಿ ಸೌಜನ್ಯ ಶಿವನಗೌಡರ 93.76% ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಶಾಲಾ ಒಟ್ಟಾರೆ ಫಲಿತಾಂಶ ಡಿಸ್ಟಿಂಕ್ಷನ್ ನಲ್ಲಿ ಎಂಟು ಫಸ್ಟ್ ಕ್ಲಾಸ್ ನಲ್ಲಿ 11 ಸೆಕೆಂಡ್ ಕ್ಲಾಸ್ ನಲ್ಲಿ 10 ವಿದ್ಯಾರ್ಥಿಗಳು ತೇರ್ಗಡೆ ಯಾಗಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ತಂದಿದ್ದಾರೆ ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಆಡಳಿತ ಮಂಡಳಿಯ ಸದಸ್ಯರು ಶಾಲೆಯ ಆಡಳಿತ ಅಧಿಕಾರಿಗಳು ಮುಖ್ಯೋಪಾಧ್ಯಾಯರು ಹಾಗೂ ಎಲ್ಲ ಶಿಕ್ಷಕರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.




