ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ 2025-26 ನೆಯ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100 ರಷ್ಟಾಗಿದೆ. ಸಾನಿಕಾ ಚಂದ್ರಶೇಖರಯ್ಯ ಕುಲಕರ್ಣಿ (604- 96.64%) ಪ್ರಥಮ, ಭಾಗ್ಯಶ್ರೀ ಆನಂದ ಬಡಿಗೇರ (603-96.48%) ದ್ವಿತೀಯ, ಸೃಷ್ಠಿ ಸತೀಶ ಹಿರೇಮಠ (595-95.20%) ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟೂ 28 ವಿದ್ಯಾರ್ಥಿಗಳಲ್ಲಿ 12 ಡಿಸ್ಟಿಂಕ್ಷನ್, 14 ಪ್ರಥಮ ಶ್ರೇಣಿ ಪಡೆದಿದ್ದಾರೆ. ಪರೀಕ್ಷಾ ಮಂಡಳಿ ನಿಗದಿಪಡಿಸಿದ ಗುಣಾತ್ಮಕ ಫಲಿತಾಂಶದಲ್ಲಿ ಶಾಲೆಯು ಶೇ. 90.35 ರಷ್ಟು ಪಡೆದು ಎ ಗ್ರೇಡ್ ದಾಖಲಿಸಿದೆ. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಹಾಗೂ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ವರದಿ : ದುಂಡಪ್ಪ ಹೂಲಿ




