ಬೆಳಗಾವಿಯಲ್ಲಿ ಅನ್ನದಾತನಿಗೆ ಬಿಗ್ ಶಾಕ್
2 ವರ್ಷದ ಅಗ್ರಿಮೆಂಟ್… 20 ವರ್ಷಕ್ಕೆ ಎಡಿಟ್
ಜಯ ಕರ್ನಾಟಕ ಸಂಘಟನೆಯಿಂದ ಭಾರಿ ಸ್ಫೋಟ
ಬೆಳಗಾವಿ :ಜಿಲ್ಲೆಯ ಖಾನಾಪುರದಲ್ಲಿ ಅನ್ನದಾತನಿಗೆ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸವಾಗಿದೆ! ಮುಗ್ಧ ರೈತರ ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಅವರ ಬದುಕಿನ ಆಧಾರವಾಗಿದ್ದ ಜಮೀನನ್ನೇ ಕಬಳಿಸಲು ಸ್ಕೆಚ್ ಹಾಕಿದ್ದಾರೆ. ಕೇವಲ 2 ವರ್ಷಕ್ಕೆ ಮಾಡಿಕೊಂಡಿದ್ದ ಕರಾರು ಪತ್ರ ಈಗ 20 ವರ್ಷಕ್ಕೆ ಬದಲಾಗಿದೆ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.”
ತೀರ್ಥಕುಂಡೆ ಗ್ರಾಮದ ಜಮೀನು, ಸಂತ್ರಸ್ತ ರೈತರು ಮತ್ತು ಜಯ ಕರ್ನಾಟಕ ಸಂಘಟನೆಯ ಪ್ರತಿಭಟನೆ/ಮನವಿ ಸಲ್ಲಿಸಿದರು “ಇವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ತೀರ್ಥಕುಂಡೆ ಗ್ರಾಮದ ತಾತೋಬಾ ವಿಠಲ್ ಖಾಮಕರ್ ಮತ್ತು ತುಕಾರಾಮ್ ವಿಠಲ್ ಖಾಮಕರ್. ಈ ರೈತರು ತಮ್ಮ 3 ಎಕರೆ ಜಮೀನನ್ನು ರಾಘವೇಂದ್ರ ರಮೇಶ್ ನಾಯ್ ಎಂಬ ವ್ಯಕ್ತಿಗೆ 15 ಲಕ್ಷ ರೂಪಾಯಿ ಬದಲಿಗೆ ಕೇವಲ 2 ವರ್ಷಗಳ ಕಾಲ ಕರಾರು ಮಾಡಿಕೊಟ್ಟಿದ್ದರು. ಆದರೆ ಇಂದು ಅದೇ ಜಮೀನು ಅವರ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ. ಏಕೆಂದರೆ, ಆ 2 ವರ್ಷದ ಅವಧಿಯನ್ನು ಆರೋಪಿ ರಾಘವೇಂದ್ರ ಎಂಬಾತ ದಾಖಲೆಗಳಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡಿ ಬರೋಬ್ಬರಿ 20 ವರ್ಷ ಎಂದು ಬದಲಿಸಿಕೊಂಡಿದ್ದಾನೆ!”
ವಂಚನೆಯ ಜಾಲ 2 ವರ್ಷದ ಕರಾರು ಪತ್ರ 20 ವರ್ಷಕ್ಕೆ ಎಡಿಟ್!
ಹೆಚ್ಚುವರಿ ಜಮೀನು ಕಬಳಿಕೆ: ಒಪ್ಪಂದಕ್ಕಿಂತ ಹೆಚ್ಚಿನ ಭೂಮಿ ಅಕ್ರಮ ವಶ.
ರಾಜಕೀಯ ಪ್ರಭಾವ: ಪೊಲೀಸ್ ದೂರು ನೀಡಿದರೂ ಕ್ರಮ ಕೈಗೊಳ್ಳದ ಖಾನಾಪುರ ಪೊಲೀಸ್ ಇಲಾಖೆ.
ರೈತರ ಮುಗ್ಧತೆಯನ್ನು ಅಸ್ತ್ರವಾಗಿಸಿಕೊಂಡು ಈ ವಂಚನೆ ಮಾಡಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಗಂಭೀರ ಆರೋಪ ಮಾಡಿದೆ. ಕೇವಲ ಸಮಯದ ಬದಲಾವಣೆ ಮಾತ್ರವಲ್ಲ, ಒಪ್ಪಂದದಲ್ಲಿ ಇರುವುದಕ್ಕಿಂತ ಹೆಚ್ಚಿನ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂಬುದು ಸಂಘಟನೆಯ ವಾದ. ಈ ಬಗ್ಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಸಹ ಆರೋಪಿಯ ರಾಜಕೀಯ ಪ್ರಭಾವದಿಂದಾಗಿ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.”
ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿ
ರೈತರಿಗೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ. ಹಣದ ಮದ ಮತ್ತು ರಾಜಕೀಯ ಪವರ್ ಬಳಸಿ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗುತ್ತಿದೆ. ತಕ್ಷಣವೇ ತನಿಖೆಯಾಗಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡಲಾಗುವುದು.”
ವರದಿ : ಮಹಾಂತೇಶ್ ಎಸ್ ಹುಲಿಕಟ್ಟಿ




