
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿಯಲ್ಲಿ ಇದೀಗ ಹಬ್ಬದ ವಾತಾವರಣ. ಇಲ್ಲಿ ನೂತನವಾಗಿ ನಿರ್ಮಾಣವಾದ ಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಮಹಾದ್ವಾರದ ಲೋಕಾರ್ಪಣೆ ಸಂಭ್ರಮದಿAದ ಜರುಗಿತು.
ಐತಿಹಾಸಿಕ ನಾಡಿನ ಪುಣ್ಯ ಭೂಮಿಯಲ್ಲಿ ನಡೆದ ಅದ್ಭುತ ಆಧ್ಯಾತ್ಮ ಕಾರ್ಯಕ್ರಮವನ್ನು ಭಕ್ತಾಧಿಗಳು ಕಣ್ತುಂಬಿಕೊAಡರು.
ಗಣ್ಯರಿಗೆ ಸನ್ಮಾನ: ಮೇರು ಪಂಕ್ತಿಯ ಈ ಅಧ್ಯಾತ್ಮ ಕರ‍್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಗಣ್ಯರನ್ನು ಸನ್ಮಾನಿಸಲಾಯಿತು.
ಯುವ ಧುರೀಣ, ಅಂಕ ಶಾಸ್ತç ತಜ್ಞ ಹಾಗೂ ಭಾರತ ವೈಭವ ದಿನಪತ್ರಿಕೆಯ ಸಂಪಾದಕರಾದ ಡಾ. ಎನ್. ಪ್ರಶಾಂತ್‌ರಾವ್ ಅವರನ್ನು ಗೌರವದಿಂದ ಸನ್ಮಾನಿಸಲಾಯಿತು.
ಪತ್ರಿಕೋದ್ಯಮ, ರಾಜಕೀಯ, ಆಧ್ಯಾತ್ಮಿಕ ಹಾಗೂ ವಾಸ್ತು ಕ್ಷೇತ್ರದಲ್ಲಿ ಡಾ. ಎನ್. ಪ್ರಶಾಂತರಾವ್ ಅವರು ಸಲ್ಲಿಸಿದ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಕರ‍್ಯಕ್ರಮದಲ್ಲಿ ಹಲವು ಗಣ್ಯರು, ಅಪಾರ ಜನಸ್ತೋಮ ಪಾಲ್ಗೊಂಡಿದ್ದರು.




