ವಿಜಯಪುರ: 9 ತಿಂಗಳ ಪುಟ್ಟ ಮಗುವೊಂದು 422 ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆ ಬರೆದಿದೆ. ಈ ಮೂಲಕ ಮಗು ನೋಬಲ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದೆ
ವಿಜಯಪುರದ ದೀಪಕ್ ಕಟ್ಟಿ ಹಾಗೂ ಅನುಷಾ ಕಟ್ಟಿ ದಂಪತಿಯ ಮಗಳು ಐರಾ ಹೆಸರಿನ ಬಾಲಕಿಯ ಅಮೋಘ ಸಾಧನೆಗೆ ಎಲ್ಲರೂ ನಿಬ್ಬೆರಗಾಗಿದ್ದಾರೆ.
ಅತೀ ಹೆಚ್ಚು ವಸ್ತುಗಳನ್ನು ಗುರುತಿಸಿದ ಅತೀ ಕಿರಿಯ ವಯಸ್ಸಿನ ಮಗು ಎನ್ನುವ ಗೌರವಕ್ಕೆ ಐರಾ ಪಾತ್ರರಾಗಿದ್ದು, ಇವಳ ಈ ಸಾಧನೆಗೆ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಪದಕ ಹಾಗೂ ಪ್ರಮಾಣ ಪತ್ರ ಪಡೆದಿದ್ದಾಳೆ.
ಏನು ಸಾಧನೆ?
ಐರಾ ‘ಫ್ಲಕ್ಕಾರ್ಡ್’ ಬಳಸಿ ವಿಭಿನ್ನ ಪ್ರಕಾರದ 422 ವಸ್ತುಗಳನ್ನು ಗುರುತಿಸಿದ್ದಾರೆ. ಫ್ರೂಟ್ಸ್, ಸಾಕುಪ್ರಾಣಿಗಳು, ಬಾಡಿ ಪಾರ್ಟ್ಸ್, ತರಕಾರಿ ಸೇರಿದಂತೆ ಒಟ್ಟು 422 ವಸ್ತುಗಳನ್ನು ಗುರುತಿಸಿ ಸಾಧನೆ ಮಾಡಿದ್ದಾಳೆ. ಒಂಬತ್ತು ತಿಂಗಳ ಪುಟ್ಟ ಮಗು ಅದ್ಭುತ ಸಾಧನೆಗೆ ಅವಳ ಆಲೋಚನಾ ಶಕ್ತಿ, ಜ್ಞಾಪಕ ಶಕ್ತಿ ಅತ್ಯುತ್ತಮ ಕಲಿಕಾ ಸಾಮರ್ಥ್ಯಕ್ಕೆ ಪೋಷಕರೇ ನಿಬ್ಬೆರಗಾಗಿದ್ದಾರೆ
ಸಿಎಂ ಸಿದ್ದರಾಮಯ್ಯ ಮೆಚ್ಚುಗೆ
ಸಿಎಂ ಸಿದ್ದರಾಮಯ್ಯ ಅವರೂ ಈ ಪುಟ್ಟ ಬಾಲಕಿ ಐರಾಳಿಗೆ ಕರೆದು ಬಾಲಕಿಯ ಸಾಧನೆಗೆ ಗೌರವಿಸಿದ್ದು, ಜೊತೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.