ಸೇಡಂ: ಹೃದಯಾಘಾತದಿಂದ ಮೃತಪಟ್ಟ ಸಿಮೆಂಟ್ ಕಾರ್ಖಾನೆಯ ಕಾರ್ಮಿಕನ ಮೃತದೇಹವನ್ನು ಸಿಬ್ಬಂದಿಗಳು ರಸ್ತೆಯಲ್ಲಿ ಪ್ರಾಣಿಯಂತೆ ಎಳೆದೊಯ್ದು ಅವಮಾನಿಸಿರುವ ಘಟನೆ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿ ನಡೆದಿದೆ.
ಬಿಹಾರ ಮೂಲದ ಚಂದನಸಿಂಗ್ (34) ಮೃತ ವ್ಯಕ್ತಿ. ಈತ ಇಲ್ಲಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಶೌಚಾಲಯಕ್ಕೆ ತೆರಳಿದ್ದ ವೇಳೆ ಬಿಪಿ ಲೋ ಆಗಿ ಹೃದಯಾಘಾತದಿಂದ ಏಕಾಏಕಿ ಮೃತಪಟ್ಟಿರಬಹುದು. ಮೃತದೇಹದ ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್