ಬೆಳಗಾವಿ : ಪ್ರತಿದಿನ ಕುಡಿದು ಗಲಾಟೆ ಮಾಡುತ್ತಿದ್ದ ಗಂಡನನ್ನು ಬರ್ಬರವಾಗಿ ಹೆಂಡತಿ ಕೊಲೆ ಮಾಡಿ ಪರಾರಿಯಾದ ಘಟನೆ ಶನಿವಾರ ನಡೆದಿದೆ.
ಚಿಕ್ಕೋಡಿ ಮೂಲದ ಅಮಿತ್ ರಾಯಬಾಗ ಕೊಲೆಯಾದ ವ್ಯಕ್ತಿ ಅಂತ ಗುರುತಿಸಲಾಗಿದೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿ ಘಟನೆ ಸಂಭವಿಸಿದ್ದು, ಪತ್ನಿಯಿಂದಲೇ ಕೊಲೆ ನಡೆದಿದೆ.
ಅಮಿತ್ ಟಿವಿ ರಿಪೇರಿ ಮಾಡುತ್ತಿದ್ದರು. ಹೆಂಡತಿ ಆಶಾ ಗಾರ್ಮೇಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದೊಂದು ವಾರದಿಂದ ಅಮಿತ್ ವಿಪರಿತ್ ವಾಗಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಇದರಿಂದ ಬೇಸತ್ತ ಮನೆಯ ಮಾಲೀಕರು ಮನೆ ಖಾಲಿ ಮಾಡುವಂತೆ ತಿಳಿಸಿದ್ದರು.
ಇದರಿಂದ ಮನೆಯಲ್ಲಿನ ಸಾಮಗ್ರಿಗಳನ್ನು ರಾತ್ರೋರಾತ್ರಿ ಹೊರ ಹಾಕಿ ಮನೆಯ ಕಿಟಕಿ ಗಾಜುಗಳನ್ನು ಒಡೆದು ಅಮಿತ್ ಆಶಾಳ ಜೊತೆಗೆ ಮತ್ತೆ ಜಗಳ ಮಾಡಿದ್ದಾನೆ.
ಮನೆಯಲ್ಲಿದ್ದ ಹರಿತದ ಆಯುಧದಿಂದ ಗಂಡನಿಗೆ ಹಾಕಿ ಕೊಲೆ ಮಾಡಿದ ಆಶಾ ತನ್ನ ಎರಡೂ ಮಕ್ಕಳೊಂದಿಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಮಾಳಮಾರುತಿ ಪೊಲೀಸರು ಕೊಲೆ ಮಾಡಿದ ಆಶಾಳನ್ನು ಬಂಧಿಸಿದ್ದಾರೆ.