Ad imageAd image

2 ಸಾವಿರ ರೂ. ಹಣಕ್ಕಾಗಿ ಕೊಲೆ ಮಾಡಿದ ಆರೋಪಿಗಳು ಅರೆಸ್ಟ್

Bharath Vaibhav
2 ಸಾವಿರ ರೂ. ಹಣಕ್ಕಾಗಿ ಕೊಲೆ ಮಾಡಿದ ಆರೋಪಿಗಳು ಅರೆಸ್ಟ್
WhatsApp Group Join Now
Telegram Group Join Now

ಬೆಳಗಾವಿ: ಎರಡು ಸಾವಿರ ಹಣಕ್ಕಾಗಿ ಕೊಲೆ ಮಾಡಿ, ಊರಲ್ಲಿ ಜಾಲಿಯಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ ಸಂತೋಷ್ ನಾಯಿಕ್, ಹೊಳೆಪ್ಪ ಘಸ್ತಿ, ಮಹೇಶ್ ಬೇರಡ ಕೊಲೆ ಮಾಡಿದ ಆರೋಪಿಗಳು. ಅಪ್ಪಾಸಾಹೇಬ್ ಭೀಮಾ ನಾಯಿಕ್ (64) ಕೊಲೆಯಾದ ದುರ್ದೈವಿ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ವಾಳಕಿ ಗ್ರಾಮದ ಅಪ್ಪಾಸಾಹೇಬ್ 2023ರ ಅಗಸ್ಟ್ 11ರಂದು ಸಂತೆಗೆ ಹೋಗುವುದಾಗಿ ಹೇಳಿ ಹೋಗಿದ್ದರು.

ಸಂತೆಗೆ ಹೋದ ತಂದೆ ಅಪ್ಪಾಸಾಹೇಬ್ ಮರಳಿ ಮನೆಗೆ ಬಾರದಿದ್ದಕ್ಕೆ ಮಗ ಕಾಕಾಸಾಹೇಬ್ ಖಡಕಲಾಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

ಅಣ್ಣಾಸಾಹೇಬ್ರನ್ನು ಕೊಲೆ ಮಾಡಿದ ಬಳಿಕ ಮೂವರು ಆರೋಪಿಗಳು ಊರಲ್ಲಿ ಜಾಲಿಯಾಗಿ ತಿರುಗಾಡಿಕೊಂಡಿದ್ದರು. ಒಂದು ದಿನ, ಆರೋಪಿ ಸಂತೋಷ್ ‌ನಾಯಿಕ್ ಕುಡಿದ ಮತ್ತಲ್ಲಿ ಕೆಂಪಣ್ಣ ಎಂಬುವವರ ಮುಂದೆ ಕೊಲೆ ಮಾಡಿದ್ದು ನಾವೇ ಎಂದು ಹೇಳಿದ್ದನು. ಈ ವಿಚಾರವನ್ನು ಕೆಂಪಣ್ಣ ಕೊಲೆಯಾದ ಅಪ್ಪಸಾಹೇಬ್ರ ಪುತ್ರ ಕಾಕಾಸಹೇಬ್ಗೆ ಹೇಳಿದ್ದನು.

ಕೆಂಪಣ್ಣನ ಮಾತನ್ನು ಆಧರಿಸಿ ಕಾಕಾಸಾಹೇಬ್ ಪೊಲೀಸರಿಗೆ ದೂರು ನೀಡಿದ್ದರು. ಕಾಕಾಸಾಹೇಬ್ ದೂರು ಆಧರಿಸಿ ಪೊಲೀಸರು ಮೂವರನ್ನು ಬಂಧಿಸಿದರು.

ಆರೋಪಿಗಳ ಮಾಹಿತಿ ಆಧರಿಸಿ ಪೊಲೀಸರು ಮಹಾರಾಷ್ಟ್ರ ರಾಜ್ಯದ ಫೋಡಾ ಘಾಟ್ನಲ್ಲಿ ಸ್ಥಳ ಮಹಜರು ನಡೆಸದರು. ಆದರೆ, ಶವ ಈವರೆಗೂ ಪತ್ತೆಯಾಗಿಲ್ಲ.

ಮನೆ ಕಟ್ಟಲು ಆರೋಪಿ ಸಂತೋಷ್ ಅಪ್ಪಾಸಾಹೇಬ್ರಿಂದ ಮುಂಗಡ ಹಣ ಪಡೆದಿದ್ದನು. ಆದರೆ, ಸಂತೋಷ್ ಮನೆ ಕೆಲಸ ಪೂರ್ಣಗೊಳಿಸಿದೆ, ಅರ್ಧಕ್ಕೆ ಬಿಟ್ಟಿದ್ದನು. ಹೀಗಾಗಿ, ಹೆಚ್ಚುವರಿಯಾಗಿ ನೀಡಿದ್ದ ಎರಡು ಸಾವಿರ ಹಣ ನೀಡುವಂತೆ ಅಪ್ಪಸಾಹೇಬ್ ಆರೋಪಿ ಸಂತೋಷ್ಗೆ ಕೇಳಿದ್ದರು. ಈ ಎರಡು ಸಾವಿರ ರೂಪಾಯಿಗಾಗಿ ಕೊಲೆ ಮಾಡಿದ್ದಾಗಿ ಆರೋಪಿಗಳು ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!