ಹುಬ್ಬಳ್ಳಿ: 18 ವರ್ಷದ ಹುಡುಗಿಯೊಬ್ಬಳ ಬಡತನವನ್ನೇ ಬಂಡವಾಳವನ್ನಾಗಿಸಿದ 50 ವರ್ಷದ ಅಂಕಲ್, ಅವಳ ಜೊತೆ ಓಡಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ.
ಚಾಲುಕ್ಯನಗರದ ಸೆಕ್ಯೂರಿಟಿ ಗಾರ್ಡ್ ಒಬ್ಬರ ಮಗಳು, ಬಡ ಹೆಣ್ಣುಮಗಳು, ಹಣದ ಆಸೆಗೆ ಅದೇ ನಗರದ 2 ಮಕ್ಕಳ ತಂದೆ 50 ವರ್ಷದ ಪ್ರಕಾಶ್ ಗೋಪಿ, ಜೊತೆಗೆ ಓಗಿ ಹೋಗಿರುವ ಶಂಕೆ ವ್ಯಕ್ತವಾಗಿದೆ.2 -3 ವರ್ಷಗಳಿಂದ ಹುಡುಗಿಯ ಹಿಂದೆ ಬಿದ್ದಿದ್ದ ಆತ ಆಕೆಗೆ ಹಣದ ಆಸೆ ತೋರಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಇದೇ ಪ್ರಕಾಶ್ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆ ಹುಡುಗಿಯೇ ಸಂತ್ರಸ್ತೆ. ಹಾಗಾಗಿ ಅವಳನ್ನು ಕೆಲ ವರ್ಷಗಳಿಂದ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ವಾಸವಿದ್ದಳು.
ಆದರೆ ಜನವರಿ 3 ರಂದು ಹುಡುಗಿ ಅಜ್ಜಿ ಮನೆಯಿಂದ ಕಾಣೆಯಾಗಿದ್ದಾಳೆ. ಅಲ್ಲಿಂದಲೇ ಈತ, ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ ಎನ್ನುವ ಆರೋಪ ಕೂಡ ಕೇಳಿಬಂದಿದೆ.