Ad imageAd image

ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣ : ನಾಲ್ವರು ಅರೆಸ್ಟ್ 

Bharath Vaibhav
ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣ : ನಾಲ್ವರು ಅರೆಸ್ಟ್ 
WhatsApp Group Join Now
Telegram Group Join Now

ವಿಜಯಪುರ : ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯಪುರದ ಗಾಂಧಿಚೌಕ್ ನ ಪೊಲೀಸರು ಪಿಂಟ್ಯಾ ಸೇರಿದಂತೆ ನಾಲ್ವರು ಅರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಮದೀನಾ ನಗರದಲ್ಲಿ ಬಾಗಪ್ಪ ಹರಿಜನ ಭೀಕರ ಹತ್ಯೆಯಾಗಿತ್ತು. ಕೊಡಲಿ ಸೇರಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈಯಲಾಗಿದೆ.

ಬಾಡಿಗೆ ಮನೆ ಮಾಡಿ ನಗರದ ಹೊರ ವಲಯದ ರೇಡಿಯೋ ಕೇಂದ್ರದ ಬಳಿ ಬಾಗಪ್ಪ ವಾಸವಿದ್ದ. ಇನ್ನು ಫೆಬ್ರವರಿ 19 ರಂದು ವಿಜಯಪುರ ಕೋರ್ಟ್‌ಗೆ ಹಾಜರಾಗಿ, ಪ್ರಮುಖ ಸಾಕ್ಷಿ ಹೇಳುವವನಿದ್ದ ಆದ್ರೆ ಅಷ್ಟರಲ್ಲೇ ಇದೀಗ ಈ ಒಂದು ಕೊಲೆ ನಡೆದಿದೆ.

ಇನ್ನು ರಾತ್ರಿ ಬಾಗಪ್ಪ ಊಟ ಮಾಡಿ ವಾಕಿಂಗ್‌ಗೆ ಹೊರಬಂದಿದ್ದ ವೇಳೆ ಕರೆಂಟ್ ಕಟ್ ಮಾಡಿ, ಟಂಟಂನಲ್ಲಿ ಬಂದು ಅಟ್ಯಾಕ್ ಮಾಡಿದ್ದಾರೆ ಎನ್ನುವ ಮಾಹಿತಿ ಸದ್ಯ ಲಭ್ಯವಾಗಿದೆ. ಅಷ್ಟೇ ಅಲ್ಲದೆ, ಸ್ಥಳದಲ್ಲಿ ಮೂರು ಸುತ್ತು ಗುಂಡಿನ ಸದ್ದು ಕೂಡ ಕೇಳಿಬಂದಿದ್ದು, ಕೊಡಲಿಯಿಂದ ಕೊಚ್ಚಿ ಬಾಗಪ್ಪ‌ನ ಹತ್ಯೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಎಡಗೈ ಕೂಡ ಕಟ್‌ ಆಗಿದ್ದು, ಗುಪ್ತಾಂಗವನ್ನೂ ಕತ್ತರಿಸಲಾಗಿದೆ ಎಂದು ಹೇಳಲಾಗಿದೆ.

2017 ರಲ್ಲೂ ದಾಳಿ!

2017 ಆಗಸ್ಟ್‌ 8 ರಂದು ಕೋರ್ಟ್ ಆವರಣದಲ್ಲಿ ತನ್ನ ಮೇಲೆ ನಡೆದಿದ್ದ ಫೈರಿಂಗ್ ಕೇಸ್ ನಲ್ಲಿ ಸಾಕ್ಷಿ ನುಡಿಯಲು ಬಂದಿದ್ದ ಬಾಗಪ್ಪನನ್ನೇ ಹತ್ಯೆಗೈಯಲಾಗಿದೆ.

ಇನ್ನು ತಾನು ಸಾಕ್ಷಿ ನುಡಿಯಲು ಬರುತ್ತಿದ್ದೇನೆ ಎಂಬುದು ವಿರೋಧಿ ಗ್ಯಾಂಗ್‌ಗಳಿಗೆ ಗೊತ್ತಾಗದಿರಲಿ ಎಂದು ನಗರದ ಹೊರ ವಲಯದಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದ. ರಾತ್ರಿ ವಾಕಿಂಗ್ ಮಾಡಲು ಬಂದಾಗ ಹಂತಕರು ಬರ್ಬರವಾಗಿ ಹತ್ಯೆಗೈದಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!