ಸಿಂಧನೂರು : -ರಾಯಚೂರು ಜಿಲ್ಲೆಯ ಕನ್ನಡ ಭವನದಲ್ಲಿ..
ಜಿಲ್ಲಾ ಪಂಚಾಯತ್ ರಾಜ್ ಇಲಾಖೆ. ನಾಗರಿಕ ಸಬಲೀಕರಣ ಇಲಾಖೆ. ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕ್ರೀಡಾ ಇಲಾಖೆ ಜಿಲ್ಲಾ ವಿಕಲಚೇತನ ಇಲಾಖೆಗಳ. ಸಂಯುಕ್ತ ಶ್ರಯದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಹಿರಿಯ ನಾಗರಿಕ ದಿನಾಚರಣೆ” 2024 ರ ಕಾರ್ಯಕ್ರಮದಲ್ಲಿ ಸಿಂಧನೂರಿನ “ಅಕ್ಷಯ ಆಹಾರ ಜೋಳಿಗೆ” ಟ್ರಸ್ಟ್ ನ. ಗೌರವಾಧ್ಯಕ್ಷರಾದ ಶ್ರೀ ನಲ್ಲ ಕೃಷ್ಣ ಮೂರ್ತಿಯವರು ಬಡ ಕುಟುಂಬ ಒಬ್ಬ ಸಾಮಾನ್ಯ ಹಾಲಿನ ವ್ಯಾಪಾರಿ ತನ್ನ ಸಣ್ಣ ಉಳಿತಾಯದಲ್ಲಿ ಒಂದಿಷ್ಟು ಹಣವನ್ನು ಸಮಾಜ ಸೇವೆಗಾಗಿ ಬಳಕೆ ಮಾಡುತ್ತಾ ಬಂದಿರುವ ನಲ್ಲ ಕೃಷ್ಣಮೂರ್ತಿ ಅವರಿಗೆ ಜಿಲ್ಲಾ ಮಟ್ಟದ ‘ನಾಗರಿಕ ಶ್ರಮಜೀವಿ ಪ್ರಶಸ್ತಿ’ ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ.
ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ‘ನಲ್ಲ ಕೃಷ್ಣಮೂರ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ – ಕಾರುಣ್ಯಶ್ರಮದ ಆಡಳಿತಾಧಿಕಾರಿ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ. ಜೀವಸ್ಪಂದನ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ. ಅಕ್ಷಯ ಆಹಾರ ಜೋಳಿಗೆ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲ. ಶರಣಮ್ಮ.ಸಿದ್ದಯ್ಯ ಸ್ವಾಮಿ. ನಾಗಣ್ಣ ಶಿಕ್ಷಕರು. ಇನ್ನಿತರರು ಇದ್ದರು.
ವರದಿ:- ಬಸವರಾಜ ಬುಕ್ಕನಹಟ್ಟಿ