ಸಿಂಧನೂರು :- ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಇಲ್ಲಿಯವರೆಗೂ ಜಾರಿ ಮಾಡದೆ ಇರುವುದನ್ನು ಖಂಡಿಸಿ ಅಕ್ಟೋಬರ್ 3 ರಂದು ಸಿಂಧನೂರು ಬಂದ್. ಕರೆ ನೀಡಲಾಗಿದೆ ಎಂದು ನಗರದ ಪತ್ರಿಕ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಉಪ ವರ್ಗೀಕರಣಕ್ಕೆ ಅವಕಾಶ ನೀಡದೆ ಒಳ ಮೀಸಲಾತಿ ನೀಡುವ ವಿವೇಚನೆಯನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟಿದೆ .
ಆದರೂ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡದೆ ವಿಳಂಬ ಧೋರಣೆ ಅನುಸರಿಸಿ ಕಾಲಾವರಣ ಮಾಡುತ್ತಿರುವುದರಿಂದ ಅಕ್ಟೋಬರ್ 3 ರಂದು ಸಿಂಧನೂರ್ ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು.
ಈ ಬಂದ್ ಕರೆಗೆ ಸ್ಥಳೀಯ ಎಲ್ಲಾ ಶಾಲಾ -ಕಾಲೇಜು. ವ್ಯಾಪಾರಿಗಳು, ಸಂಘ- ಸಂಸ್ಥೆಗಳು. ಬೆಂಬಲ ನೀಡಬೇಕೆಂದು ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಸಂಚಾಲಕರಾದ-ಆರ್. ಬೋನ್ ವಂಚರ್. ಅಲ್ಲಮ ಪ್ರಭು ಪೂಜಾರಿ . ಯಮನಪ್ಪ ಬಿಎಸ್ಎನ್ಎಲ್. ನಾಗರಾಜ ಪುಜಾರಿ. ಅಂಬ್ರೂಸ್. ಅಮರೇಶ್ ಗಿರಿಜಾಲಿ. ರಾಮಣ್ಣ ಸಾಸಲಮರಿ. ಮರಿಯಪ್ಪ. ಮಾದೇವ ಧೂಮತಿ. ಇನ್ನು ಅನೇಕರಿದ್ದರು
ವರದಿ:- ಬಸವರಾಜ ಬುಕ್ಕನಹಟ್ಟಿ