Ad imageAd image

ಕ. ದ. ಸ. ಸ. ಸಮಿತಿಯವರಿಂದ ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನ ಆಚರಣೆ

Bharath Vaibhav
ಕ. ದ. ಸ. ಸ. ಸಮಿತಿಯವರಿಂದ ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನ ಆಚರಣೆ
WhatsApp Group Join Now
Telegram Group Join Now

ರಾಯಬಾಗ : ಹಿಡಕಲ್ ಗ್ರಾಮದಲ್ಲಿ ಕ. ದ. ಸ. ಸ. ಸಮಿತಿಯವರಿಂದ ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನ ಆಚರಿಸಲಾಯಿತು.

ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಜೈ ಭೀಮ್ ನಗರದಲ್ಲಿರುವ ಭೀಮವಾದ ಕಾರ್ಯಾಲಯದಲ್ಲಿ ಮಹಾತಾಯಿ ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಮಿತಿ ಸದಸ್ಯರಾದ ರಾಘವೇಂದ್ರ ಸಿಂಪಿಯವರು ಮಾತನಾಡಿ ಅಂಬೇಡ್ಕರ್ ಅವರ ಪತ್ನಿ ರಮಬಾಯಿ ಸಾಮಾನ್ಯ ಹೆಣ್ಣು ಮಗಳಾಗಿರಲಿಲ್ಲ ತನ್ನೆಲ್ಲ ಸುಖ ಸಂತೋಷ ನೆಮ್ಮದಿ ಬದಿಗೊತ್ತಿ ಗಂಡನ ಹೋರಾಟದ ದಾರಿಗೆ ಹೆಗಲಿಗೆ ಹೆಗಲು ನೀಡಿ ನಿಂತ ಮಹಾಸಾದ್ವಿಮನಿ . ಜೀವನದ ಕೊನೆ ಉಸಿರಿನವರೆಗೂ ಬದುಕಿನಲ್ಲಿ ಎದುರಾದ ಕಷ್ಟಗಳನ್ನು ನುಂಗಿ ಪತಿಗೆ ಪ್ರೋತ್ಸಾಹ ನೀಡುತ್ತಾ, ಹೋರಾಟವೆಂಬ ಮಹಾಸಾಗರದಂತಿದ್ದ ಅವರ ಚಿಂತನೆಗೆ ಶಕ್ತಿಯಾಗಿ ನಿಂತ ಅಸಾಮಾನ್ಯ ಮಹಿಳೆ ಮಾತೆ ರಮಾಬಾಯಿ ಅಂಬೇಡ್ಕರ್ ಎಂದು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯರಾದ ವಿನೋದ್ ಸಿಂಪಿ ಮುಖಂಡರಾದ ಕಾಕಾ ಸಾಹೇಬ್ ಕಾಂಬಳೆ. ವಿಠ್ಠಲ ನಡುಕೇರಿ.ವಿವೇಕ್ ಸನದಿ.ನಿಖಿಲ್ ಕಾಂಬಳೆ.ಚೈತನ್ ಸಿಂಪಿ.ಶೇಖರ್ ಪಾರ್ಥನಳ್ಳಿ .ವಿಠ್ಠಲ ಬಜನಾಯಿಕ.
ದೀಪಕ್ ಪಾರ್ಥನಳ್ಳಿ ದರ್ಶನ್ ನಡುಕೇರಿ. ವಿಕಾಸ ಸಿಂಪಿ.ರಾಹುಲ್ ನಾವಿ. ಸತೀಶ ಸಿಂಪಿ. ಆದಿತ್ಯ ಸಿಂಪಿ. ಯಂಕಪ್ಪ ಇಂಗಳೇ ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!