ವಿಜಯಪುರ : ಬಾಗಪ್ಪ ಹರಿಜನ ಕೊಲೆಗೆ ಭೀಮಾತೀರ ಬೆಚ್ಚಿಬಿದ್ದಿದೆ.ಆರೋಪಿಗಳ ಪತ್ತೆಗೆ ಖಾಕಿಪಡೆ ತಲಾಶ್ ಶುರುಮಾಡಿದೆ. ಬಾಗಪ್ಪ ಹರಿಜನ್ ಹತ್ಯೆಗೆ ಸಂಬಂಧಿಸಿದಂತೆ ಇದೀಗ ಆತನ ಮಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಮುಖವಾಗಿ ಪಿಂಟ್ಯಾ ಎಂಬ ವ್ಯಕ್ತಿಯ ಹೆಸರನ್ನು ಮಗಳು ಉಲ್ಲೇಖಿಸಿದ್ದಾರೆ. ಸದ್ಯ ಬಾಗಪ್ಪನ ಮಗಳು ಕೊಟ್ಟ ದೂರಿನ ಅನ್ವಯ ಪೊಲೀಸರು ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಗುಂಡಿನ ದಾಳಿಗೂ ಜಗ್ಗದ ಬಾಗಪ್ಪ ನಿನ್ನೆ ರಾತ್ರಿ ನಡೆದ ದಾಳಿಯಲ್ಲಿ ಬಲಿಯಾಗಿದ್ದಾನೆ. ಇನ್ನು ಬಾಗಪ್ಪನ ಹತ್ಯೆಯ ಹಿಂದೆ ಪಿಂಟ್ಯಾ ಎಂಬ ವ್ಯಕ್ತಿಯ ಹೆಸರು ಬಲವಾಗಿ ಕೇಳಿಬಂದಿದೆ.
ಬಾಗಪ್ಪನ ಮಗಳು ಗಂಗೂಬಾಯಿ ದೂರು ನೀಡಿದ್ದಾಳೆ. ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಹಿಂದೆ ಕೊಲೆಯಾದ ರವಿ ಅಗರಖೇಡ್ ಸಹೋದರ ಪಿಂಟ್ಯಾ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.
ರವಿ ಸಹೋದರ ಪಿಂಟ್ಯಾ ಹಾಗೂ ಆತನ ಸಹಚರರಿಂದ ಕೃತ್ಯ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಂಟ್ಯಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ವರ್ಷ ವಿಜಯಪುರದ ಕೋರ್ಟ್ನಿಂದ ಸ್ಕೂಟಿಯಲ್ಲಿ ಬರುತ್ತಿರುವಾಗ ರವಿ ಎಂಬಾತನ ಗಾಡಿಗೆ ಇನ್ನೋವಾ ಕಾರ್ ಡಿಕ್ಕಿಯಾಗಿತ್ತು.
ಡಿಕ್ಕಿಯಾದ ಪರಿಣಾಮ ರವಿ ಮೃತಪಟ್ಟಿದ್ದನು. ಅವನ ದೇಹ ಕಾರಿನ ಮುಂಭಾಗದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಸುಮಾರು 2 ಕಿಮೀ ದೂರದವರೆಗೂ ರವಿ ನರಳಾಟ ಅನುಭವಿಸಿದ್ದನು. ಬಾಗಪ್ಪ ಹತ್ಯೆ ಬಳಿಕ ರವಿ ಜೊತೆಗಿನ ಪೋಟೋ ಸ್ಟೇಟಸ್ ಹಾಕಿರುವ ಪಿಂಟ್ಯಾ ಅಣ್ಣಾ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾನೆ ಎನ್ನಲಾಗಿದೆ.