ಮುದಗಲ್:– ಲಿಂಗಸುಗೂರು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಅಯ್ಯಪ್ಪ ಬನ್ನಿಗೋಳ (65) ಅವರು ಹೃದಯ ಅಫಘಾತದಿಂದ ಗುರುವಾರ ನಿಧನ ಹೊಂದಿದರು.
ಇವರಿಗೆ ಬುಧವಾರ ಹೃದಯ ಅಫಘಾತ ಕಾಣಿಸಿಕೊಂಡಿತು. ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರಿಗೆ ಹೆಂಡತಿ ಹೇಮವತಿ, ಮಗಳು ಸುಜಾತಾ ಇದ್ದಾರೆ. ಅಂತ್ಯಕ್ರಿಯೆ ಮುದಗಲ್ ದಲ್ಲಿರುವ ಅವರ ಸ್ವಂತ ಜಮೀನುನಲ್ಲಿ ಶುಕ್ರವಾರ ನಡೆಯುತ್ತಿದೆ.
ವರದಿ:-ಮಂಜುನಾಥ ಕುಂಬಾರ