ಐಗಳಿ:- ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಹಿಂಗಾರು ಬಿತ್ತನೆ ಬೀಜ ವಿತರಣೆಗೆ ಗ್ರಾಮದ ಮುಖಂಡ ಸಿ ಎಸ್ ನೇಮಗೌಡ ಅವರು ಚಾಲನೆ ನೀಡಿದರು. ಶ್ರೀ ಬಸವೇಶ್ವರ ಪ್ರಾಥಮಿಕ ಕೃಷಿ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ರೈತರಿಗೆ ಹಿಂಗಾರು ಜೋಳ ಮತ್ತು ಕಡಲೆ ಬೀಜವನ್ನು ಯೋಗ್ಯ ದರದಲ್ಲಿ ನೀಡಲಾಗುವುದು.
ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕರು ನಿಂಗಣ್ಣ ಬಿರಾದಾರ ಕೃಷಿ ಅಧಿಕಾರಿ ಯಕ್ಕಪ್ಪ ಉಪ್ಪಾರ ಹಾಗೂ ಅಪ್ಪಸಾಬ ಪಾಟೀಲ್ ಶಿವಾನಂದ ಸಿಂಧೂರ ಶ್ರೀಸೈಲ ಮಿರ್ಜಿ ಮೌಳೇಶ್ವರ ನೇಮಗೌಡ ಗುಂಡು ತೆಲಸಂಗ ಅಂಬಣ್ಣ ಬಿರಾದಾರ ನಿಂಗೌಡ ಪಾಟೀಲ್ ಬೇರು ಹುಣಸಿಕಟ್ಟಿ ಚಂದ್ರಕಾಂತ ಪಾಟೀಲ್ ಸೇರಿದಂತೆ ಸಿಬ್ಬಂಧಿಗಳು ಉಪಸ್ಥಿತಿ ಇದ್ದರು