ರಾಗಿಯಿಂದ ತಯಾರಿಸಿದ ಆರೋಗ್ಯಕರ ಮತ್ತು ರುಚಿಕರವಾದ ಇಡ್ಲಿ ಮಾಡುವ ಸರಳ ವಿಧಾನ. ಈ ಪಾಕವಿಧಾನವು ರಾಗಿ ಇಡ್ಲಿ ತಯಾರಿಸಲು ಬೇಕಾದ ಸಾಮಗ್ರಿಗಳು ಮತ್ತು ಹಂತ ಹಂತದ ಸೂಚನೆಗಳನ್ನು ಒಳಗೊಂಡಿದೆ.
ರಾಗಿ ಇಡ್ಲಿ ಪಾಕವಿಧಾನ: ಇಡ್ಲಿ ಸಾಂಬಾರ್ ಆರೋಗ್ಯಕರ ಮತ್ತು ರುಚಿಕರವಾದ ಉಪಹಾರ. ರಾಗಿಯಿಂದ ತಯಾರಿಸಿದ ಆರೋಗ್ಯಕರ ಇಡ್ಲಿ ಮಾಡುವ ವಿಧಾನ ಇಲ್ಲಿದೆ. ರಾಗಿ ಇಡ್ಲಿ ಪಾಕವಿಧಾನ ಸಾಮಗ್ರಿಗಳು: 1 ಕಪ್ ರಾಗಿ ಹಿಟ್ಟು, 1 ಕಪ್ ಇಡ್ಲಿ ಅಕ್ಕಿ, ½ ಕಪ್ ಉದ್ದಿನ ಬೇಳೆ, 1 ಚಮಚ ಮೆಂತ್ಯ, ರುಚಿಗೆ ತಕ್ಕಷ್ಟು ಉಪ್ಪು, ನೀರು, ಎಣ್ಣೆ/ತುಪ್ಪ.
ರಾಗಿ ಇಡ್ಲಿಗೆ ಹಿಟ್ಟನ್ನು ತಯಾರಿಸುವುದು: ಇಡ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಪ್ರತ್ಯೇಕವಾಗಿ ತೊಳೆಯಿರಿ. ಉದ್ದಿನ ಬೇಳೆ, ಅಕ್ಕಿ ಮತ್ತು ಮೆಂತ್ಯವನ್ನು ನೀರಿನಲ್ಲಿ 4-6 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಉದ್ದಿನ ಬೇಳೆ, ಅಕ್ಕಿ ಮತ್ತು ಮೆಂತ್ಯವನ್ನು ನುಣ್ಣಗೆ ರುಬ್ಬಿಕೊಳ್ಳಿ.
ರಾಗಿ ಇಡ್ಲಿ ಹಿಟ್ಟನ್ನು ಕಲಸುವುದು: ರುಬ್ಬಿಕೊಂಡ ನೆನೆಸಿದ ಉದ್ದಿನಬೇಳೆ, ಅಕ್ಕಿ ಹಾಗೂ ಮೆಂತ್ಯದ ಹಿಟ್ಟಿಗೆ ರಾಗಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದು ತುಂಬಾ ದಪ್ಪವಾಗಿದ್ದರೆ ಸ್ವಲ್ಪ ನೀರು ಸೇರಿಸಿ. ಉಪ್ಪು ಸೇರಿಸಿ ಮತ್ತೆ ಮಿಶ್ರಣ ಮಾಡಿ.
ಇಡ್ಲಿಗೆ ತಯಾರಿಸಿದ ರಾಗಿ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿ ಅದನ್ನು ಮುಚ್ಚಳದಿಂದ ಮುಚ್ಚಿ ಬೆಚ್ಚಗಿನ ಸ್ಥಳದಲ್ಲಿ 8-12 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಹುದುಗಲು ಬಿಡಬೇಕು. ನಂತರ ಬೆಳಗ್ಗೆ ಅದನ್ನು ತೆರದು ಇಡ್ಲಿ ಪಾತ್ರೆಯಲ್ಲಿ ನೀರು ತುಂಬಿಸಿ, ಅದನ್ನು ಕುದಿಸಬೇಕು.
ನಂತರ, ಇಡ್ಲಿ ಅಚ್ಚುಗಳಿಗೆ ಎಣ್ಣೆ/ತುಪ್ಪ ಸವರಿ ಈಗಾಗಲೇ ಸಿದ್ಧಪಡಿಸಿ ಇಟ್ಟಿದ್ದ ಹಿಟ್ಟನ್ನು ಇಡ್ಲಿ ಅಚ್ಚುಗಳಲ್ಲಿ 3/4ರಷ್ಟು ತುಂಬಿಸಬೇಕು. ಮಧ್ಯಮ ಉರಿಯಲ್ಲಿ 10-15 ನಿಮಿಷಗಳ ಕಾಲ ಬೇಯಿಸಿ.
ಇಡ್ಲಿ ಅಚ್ಚುಗಳನ್ನು ತೆಗೆದು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಇಡ್ಲಿಗಳನ್ನು ತೆಗೆದು ಚಟ್ನಿ, ಸಾಂಬಾರ್ ಜೊತೆ ಬಡಿಸಿ. ನಂತರ ಮನೆಯವರೆಲ್ಲರೂ ಸೇರಿ ರುಚಿ ರುಚಿಯಾದ ರಾಗಿ ಇಡ್ಲಿಯನ್ನು ಸವಿಯಬಹುದು.