ಸೇಡಂ:- ತಾಲೂಕಿನ ಮಳಖೇಡ ಸಮುದಾಯ ಆರೋಗ್ಯ ಕೇಂದ್ರದ ಡಾ. ರಾಕೇಶ್ ಎಂ ಕಾಂಬಳೆ ಅವರು ಸತತ 9 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಲಬುರಗಿ ಜಿಲ್ಲಾ ಸಮೀಕ್ಷಣ ಅಧಿಕಾರಿಗಳಾಗಿ ವರ್ಗಾವಣೆಗೊಂಡ ಸಂದರ್ಭದಲ್ಲಿ ಮಳಖೇಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸೇಡಂ ತಾಲೂಕ ಆರೋಗ್ಯ ಕೇಂದ್ರ ಅಧಿಕಾರಿಗಳಾದ ಡಾ.ಸಂಜೀವ್ ಪಾಟೀಲ್, ಆಡಳಿತ ಅಧಿಕಾರಿಗಳಾದ ಡಾ.ತಸ್ಲೀಮ್ ಫಾತಿಮಾ, ಡಾ. ಎಸ್ ಶ್ರೀದೇವಿ ಮಕ್ಕಳ ತಜ್ನರು, ಡಾ.ರಾಜೇಶ್ವರಿ, ರಾಜು ಸಂಘವಿ, ದಲಿತ ಸೇನೆ ವಲಯ ಅಧ್ಯಕ್ಷರಾದ ಭಗವಾನ್ ಭೋಚಿನ್, ಅಬ್ರಾರ್ ಖಾನ್, ಹೈಯಾಲಪ್ಪ, ಅನಿಲ್ ಕುಮಾರ್, ಶುಭಾಷ್, ಗುರುನಾಥ್, ನಾಗೇಶ್, ಶಿವಪ್ರಕಾಶ್, ಅಜರ್ ಪರ್ವೀನ್, ಅರ್ಚನಾ ಪಾಟೀಲ್, ಛಾಯದೇವಿ, ಸವಿತ, ಸುವರ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.