Ad imageAd image

ಪದೇ ಪದೇ ಬಿಯರ್ ಬೆಲೆ ಏರಿಕೆ : ಮಾರಾಟದಲ್ಲಿ ಬಾರಿ ಕುಸಿತ 

Bharath Vaibhav
ಪದೇ ಪದೇ ಬಿಯರ್ ಬೆಲೆ ಏರಿಕೆ : ಮಾರಾಟದಲ್ಲಿ ಬಾರಿ ಕುಸಿತ 
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯ ಸರ್ಕಾರ, ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಗೆ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಮದ್ಯದ ಮೇಲೆ ಎಷ್ಟೇ ದುಡ್ಡು ಹೆಚ್ಚಾಗಲಿ, ಕುಡುಕರು ಕುಡಿದೇ ಕುಡಿಯುತ್ತಾರೆ ಎಂದು ಜನಸಾಮಾನ್ಯರು ಭಾವಿಸುವುದುಂಟು.

ಆದರೆ, ಮದ್ಯದಂಗಡಿಗಳು ಸರ್ಕಾರಕಕ್ಕೆ ನೀಡುವ ಮಾಸಿಕ ಲೆಕ್ಕಾಚಾರದ ಪ್ರಕಾರ, ಜನಸಾಮಾನ್ಯರ ಈ ಅನಿಸಿಕೆ ಸುಳ್ಳಾಗಿದೆ.ಬಿಯರ್ ಮಾರಾಟದಲ್ಲಿ ಒಂದಿಷ್ಟು ಏರಿಕೆ ಕಂಡುಬಂದಿದ್ದರೂ, ಒಟ್ಟಾರೆಯಾಗಿ ಮದ್ಯ ಮಾರಾಟವು ಶೇ. 16ರಷ್ಟು ಕುಸಿತ ಕಂಡಿದೆ ಎಂದು ವರದಿಯಾಗಿದೆ.

ಕಳೆದ ಜನವರಿ 20 ರಿಂದ ಮಾರುಕಟ್ಟೆಗೆ ಬರುವ ಬಿಯರ್ ಮೇಲೆ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಿ ದರ ಏರಿಕೆ ಮಾಡಿತ್ತು. ಈ ಮೂಲಕ ಸಾಮಾನ್ಯ ಬ್ರಾಂಡ್ ಹಾಗೂ ಪ್ರೀಮಿಯಂ ಬ್ರಾಂಡ್ ಗಳವರೆಗೆ ಎಲ್ಲಾ ಬಿಯರ್ ಗಳ ಬೆಲೆ ಹೆಚ್ಚಳವಾಗಿತ್ತು.

ಸರ್ಕಾರದ ಬೆಲೆ ಏರಿಕೆಯಿಂದಾಗಿ ಪ್ರತಿ ಬಿಯರ್ ಬಾಟಲ್ ಗೆ ಕನಿಷ್ಠ 10 ರಿಂದ 50 ರೂ.ವರೆಗೆ ಏರಿಕೆಯಾಗಿತ್ತು. ಅಲ್ಲದೇ ಆಲ್ಕೋಹಾಲ್ ಪ್ರಮಾಣ ಹೆಚ್ಚಿರುವ ಬಿಯರ್ ಗೆ ಬೆಲೆ ಕೂಡ ಹೆಚ್ಚು ಮಾಡಲಾಗಿತ್ತು. ಆದರೆ ಸರ್ಕಾರ ಈ ನಿರ್ಧಾರವೇ ದೊಡ್ಡ ಪರಿಣಾಮವಾಗಿ ಬೀರಿದೆ.

ಕಳೆದ ವರ್ಷ ಜ.20 ರಿಂದ ಫೆ.20 ರ ವರೆಗೆ ಸುಮಾರು 287 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ 243 ಲಕ್ಷ ಲೀಟರ್ ನಷ್ಟು ಬಿಯರ್ ಮಾರಾಟವಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಒಂದು ತಿಂಗಳಲ್ಲಿ ಸುಮಾರು 45 ಲಕ್ಷ ಲೀಟರ್ ನಷ್ಟು ಬಿಯರ್ ಮಾರಾಟ ಕಡಿಮೆಯಾಗಿದೆ.

WhatsApp Group Join Now
Telegram Group Join Now
Share This Article
error: Content is protected !!