Ad imageAd image

ಗಾಂಧೀಜಿ ಲಾಲ್ ಬಹದ್ದೂರ್ ಶಾಸ್ತ್ರಿ ಮಹಾನ್ ದೇಶಪ್ರೇಮಿಗಳು. ಶರಣು

Bharath Vaibhav
ಗಾಂಧೀಜಿ ಲಾಲ್ ಬಹದ್ದೂರ್ ಶಾಸ್ತ್ರಿ ಮಹಾನ್ ದೇಶಪ್ರೇಮಿಗಳು. ಶರಣು
WhatsApp Group Join Now
Telegram Group Join Now

ಶಹಾಪುರ:- ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಅಹಿಂಸಾ ಚಳುವಳಿ ಮೂಲಕ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ದೇಶಪ್ರೇಮಿ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣು ನಾಯ್ಕಲ್ ಹೇಳಿದರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಅಂಗವಾಗಿ ಶಹಾಪುರ ನಗರದ ಹೃದಯ ಭಾಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ಪ್ರೇರಣೆಯಿಂದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಮಹಾನ್ ನಾಯಕ ಎಂದರು ದೇಶಕ್ಕೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸೇವೆ ಮತ್ತು ಕೊಡುಗೆ ಅಪಾರವಾದದ್ದು ನಾವೆಲ್ಲರೂ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸ್ವಚ್ಛತೆಗೆ ಪ್ರತಿಯೊಬ್ಬರು ಪಣತೊಡಬೇಕು ಎಂದು ಪ್ರಾಂಶುಪಾಲರಾದ ಶ್ರೀ ಶರಣು ನಾಯ್ಕಲ್ ಹೇಳಿದರು. ನಂತರ ಮಾತನಾಡಿದ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ. ಶುದ್ಧ ಭಾವದ ಅಪ್ರತಿಮ ದೇಶಪ್ರೇಮಿ ಶಾಸ್ತ್ರಿಜಿ : ರಾಷ್ಟ್ರ ಕಂಡ ಅನೇಕ ಮಹಿಮಾತೀತ ಪುಣ್ಯ ಪುರುಷರಲ್ಲಿ ಶಾಸ್ತ್ರಿಜಿ ಅವರು ಕೂಡಾ ಒಬ್ಬರು. ರಾಷ್ಟ್ರದ ಉದ್ದರಣೆಗಾಗಿ ತಮ್ಮ ಉಸಿರನ್ನು ಚೆಲ್ಲಿದ ಅಪ್ರತಿಮ ರಾಷ್ಟ್ರಭಿಮಾನಿ ಲಾಲ್ ಬಹುದ್ದೂರ್ ಶಾಸ್ತಿ ಎಂದರೆ ಅತಿಷಿಯೋಕ್ತಿಯಾಗಲಿಕ್ಕಿಲ್ಲ.

ಬಡತನವನ್ನೆ ಉಂಡು ಬೆಳೆದ ಇವರಲ್ಲಿ ಮೌಲಿಕವಾದ ಗುಣಗಳು ಜನ್ಮದತ್ತವಾಗಿಯೇ ಬಂದಿದ್ದವು. ಈ ಗುಣಗಳನ್ನು ಜೀವಿತಾವಧಿವರೆಗೆ ತನ್ನಲ್ಲಿ ಅಂತರ್ಗತವಾಗಿಸಿಕೊಂಡು ಆ ನೆಲೆಯಲ್ಲಿ ತನ್ನ ಬದುಕನ್ನು ಸವೆಸಿದ ಓರ್ವ ಆದರ್ಶ ವ್ಯಕ್ತಿಯಾಗಿ ಶಾಸ್ತ್ರಿಯವರನ್ನು ಇಂದಿನ ಯುವಸಮುದಾಯಗಳು ಪರಿಭಾವಿಸಬೇಕಾದ ಅಗತ್ಯತೆಯಿದೆ.ಸರಳ ಬದುಕಿನ ಅಸಾಧರಣ ವ್ಯಕ್ತಿತ್ವದ ಬಹುತ್ವದ ಸೆಲೆಯಾ ಅವುಗಳನ್ನು ಪ್ರಮುಖವಾಗಿ ಪರಿಶೀಲಿಸುವದಾದರೆ ದೇಶದಲ್ಲಿ ತಲೆದೋರಿದ್ದ ಆಹಾರದ ಆಹಾಕಾರವನ್ನು ತಮ್ಮ ಅಗಾಧವಾದ ಬುದ್ದಿಮತ್ತೆಯಿಂದ ಪರಿಹರಿಸಿದ್ದರು, ಕೇವಲ 18 ತಿಂಗಳುಗಳ ತಮ್ಮ ಪ್ರಧಾನಿ ಅವಧಿಯಲ್ಲಿ ಜಗತ್ತು ಮೆಚ್ಚುವಂತ ಕೆಲಸ ಮಾಡಿ, ತಾನೊರ್ವ ಅಭಿವೃದ್ಧಿ ಆರಾಧಕ ಎಂದು ನಿರೂಪಿಸಿದ್ದಾರೆ.

ತನ್ನ ದೃಢವಾದ ಆಡಳಿತದ ನಿಲುವುಗಳ ಮೂಲಕ ರಾಷ್ಟ್ರದ ಹಿತವನ್ನು ಕಾಪಾಡಿದ್ದಾರೆ. ತಮ್ಮ ಅಧಿಕಾರದುದ್ದಕ್ಕೂ ಜನಮನದ ಭಾವನೆಗಳಿಗೆ ಸ್ಪಂದಿಸಿದ ಸ್ಪಂದನಾಶೀಲ ಹೃದಯಿಯಾಗಿದ್ದಾರೆ. ಇವರ ಆಡಳಿತದಲ್ಲಿ ಎದ್ದಿದ್ದ ಭಾಷಾ ಸಮಸ್ಯೆಯನ್ನು ಜಾಣ್ಮೆಯಿಂದ ಪರಿಹರಿಸಿದ್ದರು.ತಾವು ನಿರ್ವಹಿಸಿದ ಮಂತ್ರಿ ಸ್ಥಾನಗಳಿಗೆ ನ್ಯಾಯೋಚಿತವಾದ ಮನ್ನಣೆ ನೀಡಿದ್ದಾರೆ. ಇವರ ಬಹುದೊಡ್ಡ ಘೋಷವಾಕ್ಯಯಾದ ಜೈ ಜವಾನ್ ಜೈ ಕಿಸಾನ್ ಎನ್ನುವದು ಇವರನ್ನು ಬಹುದೊಡ್ಡ ರಾಜಕೀಯ ಡಾರ್ಶನಿಕ ನನ್ನಾಗಿ ಮಾಡಿತ್ತು. ರಾಷ್ಟ್ರದ ಅಭಿವೃದ್ಧಿಯ ಮುಂಚೂಣಿಯ ನೆಲೆಯಲ್ಲಿ ಆಡಳಿತಗಾರರು, ಉದ್ದಿಮೆದಾರರು, ಉನ್ನತಸ್ಥಾನ ಹೊಂದಿದ್ದವರು ಮಾತ್ರ ದೇಶ ವಿಕಾಸದೆಡೆಗೆ ಕೊಂಡೋಯ್ಯಲು ಸಮರ್ಥರು ಎಂಬ ಮುಂದುವರೆದ ಮನಗಳ, ಮತ್ತು ಆಡಳಿತಗಾರರ ವಾದವನ್ನು ತಳ್ಳಿ ಹಾಕಿ, ಈ ನೆಲದ ಮೂಲಧಾರವಾದ ಸೈನಿಕರು ಹಾಗು ರೈತರಿಗೆ ಈ ರಾಷ್ಟ್ರವನ್ನು ಕಟ್ಟುವ ತಾಕತ್ತಿದೆ ಎನ್ನುವ ತತ್ವವನ್ನು ಸಾರ್ವತ್ರೀಕರಣಗೊಳಿಸಿ, ಈ ಶ್ರಮಜೀವಿಗಳ ಔಚಿತ್ಯವನ್ನು ದೇಶದೆದುರು ಬಹಿರಂಗಗೊಳಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.

ಸರಕಾರಗಳು ಬಹುವಾಗಿ ಆಲಂಗಿಸಿಕೊಳ್ಳದ ಈ ಎರಡು ಸೇವಾವಲಯಗಳನ್ನು ಗುರುತಿಸಿ ಆ ವರ್ಗಗಳಿಗ ವ್ಯಕ್ತಿಯೋರ್ವರು ಸಿಗಲಾರರು. ಇಂತಹ ಅಪ್ರತಿಮ, ಅನನ್ಯ, ಅನುಪಮ ವ್ಯಕ್ತಿಯಾದ ಶ್ರೀ ಲಾಲ ಬಹಾದ್ದೂರ್ ಶಾಸ್ತ್ರಿಜಿಯ ವರ ಚಿಂತನೆಗಳನ್ನು ಇಂದಿನ ಯುವ ಸಮುದಾಯ ಬಳಸಿಕೊಂಡಾಗ ಮಾತ್ರ ವೈಚಾರಿಕತೆ ಪ್ರಸರಣ ಅರ್ಥಪೂರ್ಣವಾಗಿ ಸಮಾಜದಲ್ಲಿ ಹರಡಲು ಸಾಧ್ಯವಾಯಿತು ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ,ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ, ಭಾಗ್ಯಮ್ಮ ಪಾಟೀಲ್, ಸುಭಾಸ ನಾಯಕ,ನಿಲಯಪಾಲಕರಾದ ಶ್ರೀ ಸಂತೋಷ ಜೋಗೂರ, ಮಲ್ಲಿಕಾರ್ಜುನ ಮಳಿಕೇರಿ, ಚಂದ್ರು ರಾಠೋಡ, ಸೌಮ್ಯ ಕುಲಕರ್ಣಿ , ಶಕುಂತಲಾ ಸುರಪುರ, ದೀಪಾ ಮೇಡಂ ಹಾಗೂ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು

WhatsApp Group Join Now
Telegram Group Join Now
Share This Article
error: Content is protected !!