ಕಲಘಟಗಿ: -ಗ್ರಾಮ ಪಂಚಾಯತಿಯಲ್ಲಿ ಸಿಬ್ಬಂದಿಗಳಿಗೆ ಕೆಲಸದ ಒತ್ತಡ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ಅಕ್ಟೊಬರ್ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟವಾಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕ ಪಿಡಿಓ ನೌಕರ ಒಕ್ಕೂಟದ ತಾಲ್ಲೂಕ ಅಧ್ಯಕ್ಷ ಸೋಮಶೇಖರ ಎಲಿಗಾರ ತಿಳಿಸಿದರು.
ಪಟ್ಟಣದ ತಾಲ್ಲೂಕ ಪಂಚಾಯತಿ ಸಭಾಭವನದಲ್ಲಿ ತಾಲ್ಲೂಕ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ,ಕ್ಲಾರ್ಕ್ ಹಾಗೂ ಡಾಟಾ ಎಟ್ರಿ ಆಪರೇಟರ್ ಒಕ್ಕೂಟ ಹಾಗೂ ಪಿಡಿಓ ನೌಕರ ಒಕ್ಕೂಟ ಮತ್ತು ರಾಜ್ಯ ಸರ್ಕಾರ ನೌಕರ ಸಂಘದ ಜಂಟಿಯಾಗಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಿಡಿಓ ಹುದ್ದೆ ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸುವದು, ನರೇಗಾ ಯೋಜನೆಯ ಗುರಿ ನಿಗದಿ ಕೈಬಿಡುವದು, ಪಂಚಾಯತಿ ಕಚೇರಿಗೆ ಅವಶ್ಯಕತೆ ಇರುವ ಸಿಬ್ಬಂದಿ ಕೊರತೆ ನಿಗಿಸುವದು ಇನ್ನುಳಿದ ಬೇಡಿಕೆ ಸರ್ಕಾರಕ್ಕೆ ಈಡೇರಿಸಲು ಒತ್ತಾಯಿಸಲಾಗುವದು ಎಂದರು.
ಕ್ಲಾರ್ಕ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಒಕ್ಕೂಟದ ತಾಲ್ಲೂಕ ಅಧ್ಯಕ್ಷ ಪ್ರಭು ಅಂಗಡಿ ಮಾತನಾಡಿ ಸರ್ಕಾರ ಪಂಚಾಯತಿಗೆ ಇ ಸ್ವತ್ತು ಹೊರತು ಪಡಿಸಿ ಜನನ ಮರಣ, ಪ್ರಮಾಣ ಪತ್ರ ನೀಡಲು ಆದೇಶ ಮಾಡಿದ್ದು ನಮಗೆ ಇನ್ನೊಬ್ಬ ಆಪರೇಟರ್ ನೀಡಬೇಕು ಎಂದರು.
ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಸಂತೋಷ ಮಾದನಭಾವಿ ಮಾತನಾಡಿ ಕೆಡಿಪಿ, ಸಾಮಾನ್ಯ ಸಭೆ ಸರಿಯಾಗಿ ನಡೆಯುತ್ತಿಲ್ಲ, ಸದಸ್ಯರಿಗೆ ಗೌರವಧನ ಹೆಚ್ಚಳದ ಬೇಡಿಕೆ ಈಡೇರಿಸಬೇಕು ಎಂದರು.ಪಿಡಿಓ ನಾಗರಾಜಕುಮಾರ್ ಬೀದರಳ್ಳಿ ಮಾತನಾಡಿ ಹಲವು ಬಾರಿ ನಮ್ಮ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀರು ಹಾಗೂ ವಿದ್ಯುತ್ ಮೂಲಭೂತ ಸೌಕರ್ಯ ಎಂದಿನಂತೆ ಇರಲಿದೆ ಆನ್ ಲೈನ್ ಸೇವೆ ಸ್ಥಗಿತವಾಗಲಿದ್ದು ಜನರು ಸಹಕರಿಸಬೇಕು ನಮ್ಮ ಬೇಡಿಕೆ ಈಡೇರಿಸುವವರಿಗೆ ಅನಿರ್ದಿಷ್ಟವಾಧಿ ಮುಷ್ಕರ ನಡೆಸಲಾಗುವದು ಎಂದರು.
ಪಿಡಿಓಗಳಾದ ರವಿರಾಜ ಹಿರೇಗೌಡರ, ಶಂಕರ ಗೌಳೇರ, ಶಂಭುಲಿಂಗ ಹೊಸಮನಿ, ಜಿ. ಎನ್ ರಾಯನಾಳ, ರವಿಕುಮಾರ ರಾಥೋಡ, ನಾಗರಾಜ ಗಿರಿಯಪ್ಪನವರ, ಉಮ್ಮೆಶ ಚಿಕ್ಕಣ್ಣವರ ಇದ್ದರು.
ವರದಿ : ಶಶಿಕುಮಾರ ಕಲಘಟಗಿ