ಕಲಘಟಗಿ : ಸ್ಥಳೀಯ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯ ಕಲಘಟಗಿ, ಎನ್ಎಸ್ಎಸ್ ಘಟಕ, ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ, ಕಲಘಟಗಿ ತಾಲೂಕು ಪೊಲೀಸ್ ಇಲಾಖೆ ಸಂಯೋಗದಲ್ಲಿ ಈ ಕಾರ್ಯಕ್ರಮ ಜರಗಲಾಯಿತು ಈ ಕಾರ್ಯಕ್ರಮದಲ್ಲಿ ಶ್ರೀ. ನಾರಾಯಣ ಬರಮನಿ ( ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಧಾರವಾಡ ) ಮಾಧಕ ದ್ರವ್ಯ ವ್ಯಸನಗಳ ಬಳಕೆ ಬಳಕೆಯ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ. ವಿನೋದ್ ಮುಕ್ತೇದಾರ್ (DYSP ಗ್ರಾಮೀಣ ವಿಭಾಗ ಧಾರವಾಡ ) ರವರು ವಿದ್ಯಾರ್ಥಿಗಳು ದುಶ್ಚಟ ಗಳಿಂದ, ಮಾದಕ ವಸ್ತುಗಳ ದುರ್ಬಳಕೆಯಿಂದಾಗುವ ಪರಿಣಾಮದ ಕುರಿತು ಮಾತನಾಡಿದರು. ಕಲಘಟಗಿ ತಾಲೂಕು ಪೋಲಿಸ್ ಇಲಾಖೆಯ ಸಿಪಿಐ ಶ್ರೀಶೈಲ್ ಕೌಜಲಗಿ, ಪಿಎಸ್ ಐ ಸಚ್ಚಿದಾನಂದ ಕರೇನ್ನವರ್ ಇತರ ಪೊಲೀಸ್ ಇಲಾಖೆಯ ಅಧಿಕಾರಿಗಳು, ತಾಲೂಕಿನ ಪತ್ರಕರ್ತ ಸಂಘದ ಅಧ್ಯಕ್ಷರಾದ ಪ್ರಕಾಶ್ ಲಮಾಣಿ, ಹಾಗೂ ತಾಲೂಕಿನ ಪತ್ರಕರ್ತರು
ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಆಡಳಿತ ಅಧಿಕಾರಿಗಳಾದ್ ರೆ.ಬ್ರ ವರ್ಗಿಸ್ ಕೆಜಿ ಸಂಸ್ಥೆಯ ಖಜಾಂಚಿಗಳಾದ ಅರುಳಾನಂದಮ್ ಪ್ರಾಚಾರ್ಯರಾದ ಶ್ರೀಮತಿ ನವೀನಾ ರೆಡ್ಡರ ಎನ್ಎಸ್ಎಸ್ ಯೋಜನಾಧಿಕಾರಿ ಜಾಫರ್ ಭಾವನವರ್, ಬಸವರಾಜ್ ಬಡಿಗೇರ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.