ಸಿಂಧನೂರು : –ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಸಭೆ ಸೋಮವಾರ ಬೆಳಗ್ಗೆ 11:30ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿದ್ದು ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿ ಮಾತನಾಡಿದ ದಸಂಸ ಜಿಲ್ಲಾ ಅಧ್ಯಕ್ಷ. ಮಲ್ಲಪ್ಪ ಗೋನಾಳ್ ರವರು ಬಾಬಾ ಸಾಹೇಬ್ ಅಂಬೇಡ್ಕರರವರ ಆಶಯದಂತೆ ದಲಿತ.ಹಿಂದುಳಿದ.
ಅಲ್ಪಸಂಖ್ಯಾತರ ಸಂವಿಧಾನಾತ್ಮಕವಾದ ಹಕ್ಕುಗಳನ್ನುಪಡೆಯಲು ನಿರಂತರ ಹೋರಾಟ ನಡೆಸುವುದರ ಸಲುವಾಗಿ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕು ಗ್ರಾಮಗಳಲ್ಲಿರುವ ಯುವಕರನ್ನು ಸಂಘ ಟಿಸುವ ಉದ್ದೇಶದಿಂದ ಇಂದು ರಾಜ್ಯಾಧ್ಯಕ್ಷ ರಾದ. ವಿ ದೇವರಾಜ ಸರ್. ಅವರ ಆದೇಶದ ಮೇರೆಗೆ ನೂತನ ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಪ್ರತಿ ನೀಡಲಾಯಿತು.
ನೂತನ ಜಿಲ್ಲಾ ಪದಾಧಿಕಾರಿಗಳಾದ.- ಈರಣ್ಣ ಸುಲ್ತಾನಾಪುರ. ಜಿಲ್ಲಾ ಉಪಾಧ್ಯಕ್ಷರು ಹಾಗೂ ಹಸನ್ ಸಾಬ್ ಸಿ ಎಸ್ ಎಫ್ ಕ್ಯಾಂಪ್ ಇವರನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು ಎಂದು ಪತ್ರಿಕ ಮಾಧ್ಯಮದವರಿಗೆ ತಿಳಿಸಿದರು..ಈ ಸಂದರ್ಭದಲ್ಲಿ : ಮಲ್ಲಪ್ಪ ಗೋನಾಳ್, ಜಿಲ್ಲಾಧ್ಯಕ್ಷರು. ನಾಗರಾಜ ಸಾಸಲ್ಮರಿ ಸಂಗಮೇಶ್ ಮುಳ್ಳೂರು .. ಮಹೇಶ್ ಸಿಂಧನೂರು. ಪಂಪಾಪತಿ ಹಂಚಿನಾಳ,ಹುಲುಗಪ್ಪ ಜಾಲಿಹಾಳ,ಅಮರೇಶ ಜಾಲಿಹಾಳ,ಮತ್ತು ಸಾಗರ್ ನೀಲಕಂಠ ರಂಗಾಪುರ ಶರಣಬಸವ ಗೊಬ್ಬರಕಲ್. ಹನುಮೇಶ್ ಜಾಲಿಹಾಳ್ ಇದ್ದರು
ವರದಿ:- ಬಸವರಾಜ ಬುಕ್ಕನಹಟ್ಟಿ