ಬೆಂಗಳೂರು : –ಈಗಿನ ಪರಿಸ್ಥಿತಿಯಲ್ಲಿ ಸಂಘ ಸಂಸ್ಥೆಗಳು ಕಟ್ಟುವುದು ಸುಲಭದ ಕೆಲಸ ಆದರೆ ಬೆಳೆಸಿ ಉಳಿಸಿ ಕೊಂಡು ಹೋಗುವ ಕಷ್ಟದ ಕೆಲಸ ಎಂದು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.
ಅವರು ಕರ್ನಾಟಕ ಜನಸ್ಪಂದನ ಟ್ರಸ್ಟಿನ ೭ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಗಂಧದ ಗುಡಿ ಕನ್ನಡ ಯುವಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ನಂತರ ಅವರು ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮತ್ತು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು.
ಶ್ರೀ.ಮ.ಘ.ಚ. ಪ್ರಭು ಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಜಗದೀಶ್ವರ ಹಿರೇಮಠ್ ಮಸೂತಿ ವಿಜಯಪುರ ಜಿಲ್ಲೆ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸ್ನೇಹ ಜೀವಿ ಗೆಳೆಯರ ಬಳಗದ ಅಧ್ಯಕ್ಷ ಹಾಗೂ ಉದ್ಯಮಿ ಶಶಿಕಾಂತ್ ರಾವ್ ಸಮಾರಂಭ ಅಧ್ಯಕ್ಷೆತೆ ವಹಿಸಿ ಈ ಟ್ರಸ್ಟಿನ ಅಧ್ಯಕ್ಷ ಹನುಮಂತಪ್ಪ ಮೇಡೆಗಾರ ವಿಜಾಪುರ ಜಿಲ್ಲೆಯಿಂದ ರಾಜ್ಯದ ರಾಜಧಾನಿ ಬೆಂಗಳೂರಿಗೆ ಬದುಕು ಕಟ್ಟಿಕೊಂಡು ಸಮಾಜ ಸೇವೆ ಮಾಡುವುದರ ಮೂಲಕ ಹುಟ್ಟು ಸಾವು ಮದ್ಯೆ ಸಮಾಜಕ್ಕೆ ಏನಾದರೂ ಕೊಡಿಗೆ ಕೊಡುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವು ಬೆಳೆಯುವ ಮಕ್ಕಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದು ಶಶಿಕಾಂತ್ ರಾವ್ ಎಂದರು.
ಕರ್ನಾಟಕ ಜನಸ್ಪಂದನ ಟ್ರಸ್ಟಿನ ಸಂಸ್ಥಾಪಕ ರಾಜ್ಯಾಧ್ಯ ಕ್ಷ ಹನುಮಂತಪ್ಪ ಮೇಡೆಗಾರ್ ಸರ್ವರಿಗೂ ಸ್ವಾಗತಿಸುವ ಮೂಲಕ ಗಂಧದ ಗುಡಿ ಕನ್ನಡ ಯುವಕರ ಸಂಘದ ಅಧ್ಯಕ್ಷ ಪಿ ನಾಗರಾಜ್ ಅವರ ಸಹಕಾರ ಮಾರ್ಗದರ್ಶನ ಪ್ರೋತ್ಸಾಹ ನೀಡಿದ್ದು ಶ್ಲಾಘನೀಯ ಎಂದರು.
ಇದೆ ವೇಳೆ ಪತ್ರಿಕಾ ಮಾಧ್ಯಮದಲ್ಲಿ ತಮ್ಮದೆಯಾದ ಛಾಪು ಮೂಡಿಸಿ ಪ್ರಾಮಾಣಿಕ ಸತ್ಯ ಸತ್ಯತೆ ಮತ್ತು ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಆದರ್ಶಗಳ ಮೂಲಕ ಅವರ ಹೆಸರಿನ ಭೀಮ ಸಂದೇಶ ಕನ್ನಡ ಮಾಸ್ ಪತ್ರಿಕೆ ಸಂಪಾದಕರಾಗಿ ಪತ್ರಿಕೆ ಹೊರ ತಂದ ಕೀರ್ತಿ ಹೆಗ್ಗನಹಳ್ಳಿ ವೈ.ಜಿ ನರಸಿಂಹಮೂರ್ತಿ ಅವರಿಗೆ ‘ಜನಸ್ಪಂದನ ರಾಜ್ಯ ಮಟ್ಟದ ಮಾದ್ಯಮ ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶೆಟ್ಟಿಹಳ್ಳಿ ವಾರ್ಡಿನ ಬಿಜೆಪಿ ಅಧ್ಯಕ್ಷ ಬಿ.ಸುರೇಶ್, ಸೂರಜ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಸುಜಾತ ಮುನಿರಾಜು, ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಉಮಾದೇವಿ ನಾಗರಾಜ್, ಪ್ರದಾನ ಕಾರ್ಯದರ್ಶಿಪಿ.ಎಚ್ ರಾಜು, ಗಂಗರಾಜು, ಆದರ್ಶ ದಂಪತಿಗಳಾದ ಸದಾಶಿವ ಸ್ವಾಮಿ,ಶರಣಯ್ಯ ಜಡಿಮಠ್, ಅಂಬಣ್ಣ ಮುಡಬಿ, ಮಹಿಳಾ ಮುಖ್ಯಸ್ಥೆ ಶಿಲ್ಪಾ ಮೇಡೆಗಾರ್, ಚಂದ್ರಕಲಾ ಎಂ, ಗಿರಿಜಮ್ಮ ಬಿಜಿ. ವಿವಿಧ ಕಲಾತಂಡಗಳು, ದಾಸರಹಳ್ಳಿಯ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್