Ad imageAd image

ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಯಲ್ಲಿ ಭಾಗವಹಿಸಲು ಕಸಾಪ ಅಧ್ಯಕ್ಷ ರಮೇಶ ಸಲಗರ ಕರೆ

Bharath Vaibhav
ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಯಲ್ಲಿ ಭಾಗವಹಿಸಲು ಕಸಾಪ ಅಧ್ಯಕ್ಷ ರಮೇಶ ಸಲಗರ ಕರೆ
WhatsApp Group Join Now
Telegram Group Join Now

ಚಿಟಗುಪ್ಪ:-ಮಂಡ್ಯದಲ್ಲಿ ಇದೇ ವರ್ಷ ಡಿಸೆಂಬರ ೨೦,೨೧ ಮತ್ತು ೨೨ ರಂದು ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿ ರಥಯಾತ್ರೆ ಬೀದರ ಜಿಲ್ಲೆಯಾದ್ಯಂತ ಸಂಚರಿಸಿ ಅಕ್ಟೋಬರ್ ೧೩ಕ್ಕೆ ಅಪರಾಹ್ನ ೧:೩೦ಗಂಟೆಗೆ ಮನ್ನಾಎಖೆಳ್ಳಿ ಮಾರ್ಗವಾಗಿ ಚಿಟಗುಪ್ಪಾ ತಾಲೂಕಿಗೆ ಆಗಮಿಸುತ್ತಿದ್ದು ಚಿಟಗುಪ್ಪಾ ಪಟ್ಟಣದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಭವ್ಯವಾಗಿ ಸ್ವಾಗತ ಕೋರಿ ಬರಮಾಡಿಕೊಂಡು ಅಲ್ಲಿಂದ ಕನ್ನಡ ಜ್ಯೋತಿ ರಥದ ಮೆರವಣಿಗೆಯು ನೆಹರು ವೃತ್ತ,ಗಾಂಧಿಜೀ ವೃತ್ತ, ಬಸವೇಶ್ವರ ವೃತ್ತ ಮುಖಾಂತರ ಸಂಚರಿಸಿ ಶಿವಾಜೀ ವೃತ್ತ ದಲ್ಲಿ ಕೊನೆಗೊಳ್ಳಲಿದೆ.

ಆದುದರಿಂದ ಚಿಟಗುಪ್ಪಾ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಆಜೀವ ಸದಸ್ಯರು,ಎಲ್ಲಾ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಜನಪ್ರತಿನಿಧಿಗಳು, ಮುಖಂಡರು,ಗಣ್ಯರು,ನೌಕರ ಬಾಂಧವರು,ವ್ಯಾಪಾರಸ್ಥರು ಎಲ್ಲರೂ ಆಗಮಿಸಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಚಿಟಗುಪ್ಪಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಮೇಶ ಸಲಗರ ಮನವಿಮಾಡಿಕೊಂಡಿದ್ದಾರೆ.

ವರದಿ:ಸಜೀಶ ಲಂಬುನೋರ

WhatsApp Group Join Now
Telegram Group Join Now
Share This Article
error: Content is protected !!