ಸಿಂಧನೂರು : ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಬೀದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವು ಗೊಳಿಸಿ 14 ತಿಂಗಳ ಕಳೆದು ಹೋದರೂ ಸಹ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಖಂಡಿಸಿ ನಗರದ ಸರ್ಕಾರಿ ತೋಟಗಾರಿಕೆ ಇಲಾಖೆಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ಅನಿವಾರ್ಯವಾಗಿದೆ ಎಂದು ಬೀದಿಬದಿ ವ್ಯಾಪಾರಿಗಳ ಹೋರಾಟ ಸಮಿತಿ ಸಂಚಾಲಕ ಖಾಸಿಂಸಾಬ್ ಕಾರ್ಪೆಂಟರ್ ತಿಳಿಸಿದ್ದಾರೆ,
ಬೀದಿ ಬದಿ ವ್ಯಾಪಾರಿಗಳ ಡಬ್ಬ ಅಂಗಡಿಗಳನ್ನು ತೆರೆವುಗೊಳಿಸುವ ಸಂದರ್ಭದಲ್ಲಿ ತಾಲೂಕ ಆಡಳಿತ ಮತ್ತು ಸ್ಥಳೀಯ ಶಾಸಕರು ನಿಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡುವದಾಗಿ ಭರವಸೆ ನೀಡಿದ್ದು ಇಂದಿಗೂ ಬರವಸೆ ಬರವಸೆಯಾಗಿ ಉಳಿದಿದೆ ಪುಟ್ ಪಾತ್ ಮೇಲಿನ ಬಡವರ ಡಬ್ಬ ಅಂಗಡಿಗಳನ್ನು ತೆರವು ಮಾಡಿದಂತೆ ದೊಡ್ಡ ದೊಡ್ಡ ಶ್ರೀಮಂತರ ಮತ್ತು ರಾಜಕೀಯ ಪ್ರಭಾವಿಗಳ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸದೆ ಬಡವರ ಹೊಟ್ಟೆಗೆ ಬಡಿದ ತಾಲೂಕಾಡಳಿತ ಧೋರಣೆಯನ್ನು ವಿರೋಧಿಸಿ 15 ಏಪ್ರಿಲ್ 2026 ರಿಂದ ನ್ಯಾಯ ಸಿಗುವವರೆಗೂ ಸರ್ಕಾರಿ ತೋಟಗಾರಿ ಇಲಾಖೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿ ಪತ್ರಿಕಾ ಮಾಧ್ಯಮದ ಮುಖಾಂತರ ತಿಳಿಸಿದೆ.
ಈ ವೇಳೆ ಚಿಟ್ಟಿ ಬಾಬು. ಬಿ ಎನ್. ಯರದಿಹಾಳ. ರಮೇಶ ಪಾಟೀಲ್ ಬೇರಗಿ.ಹುಸೇನ್ ಸಾಬ್. ಖಾಸಿಂಸಾಬ್ ಕಾರ್ಪೆಂಟರ್. ಶಮಿದ್ ಸಾಬ್. ಬಾಬರ್ ಪಾಶ ಬಾಬು ಯಾಕೋಬ್. ರಹೀಂ ಸಾಬ್.ಅಸಾಲಂ. ಖಾದರ್ ಪಾಷ, ಸೇರಿದಂತೆ ಅನೇಕ ಹೋರಾಟಗಾರರು ಧರಣಿಯಲ್ಲಿ ಭಾಗವಹಿಸಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




