ಬೆಂಗಳೂರು:– ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಕೆ ಬಿಸಿ ಟ್ರಸ್ಟಿನ ಸಂಸ್ಥಾಪಕರಾದ ದಿವಂಗತ ಕೆ.ಬಿ ಚಿಕ್ಕ ಮುನಿಯಪ್ಪ(ಗಿತ್ತಪ್ಪ) ಅವರ ಸ್ಮರಣಾರ್ಥವಾಗಿ ಕಳೆದ 28 ವರ್ಷಗಳಿಂದ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸುತ್ತಾ ಬಂದಿರುತ್ತಿದ್ದೇವೆ ಅಶೋಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಕ್ಯಾಂಪಸ್ ಕಮ್ಮಗೊಂಡನ ಹಳ್ಳಿಯಲ್ಲಿ ದಿನಾಂಕ 02 ಅಕ್ಟೋಬರ್ 2024ರಂದು ಬುಧವಾರ ಬೆಳಿಗ್ಗೆ 09 ಗಂಟೆಯಿಂದ ಮದ್ಯಾಹ್ನ 2 ಗಂಟೆ ವರೆಗೆ ಅಶೋಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮತ್ತು ಕಂಪನಿಗಳ ಅಧ್ಯಕ್ಷ ಹಾಗೂ ಮಾಜಿ ನಗರ ಸಭಾ ಅಧ್ಯಕ್ಷ ಕೆ.ಸಿ ಆಶೋಕ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಶೋಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್,ಡಿ.ಆರ್.ಅಕಿಡೆಮಿ ಮತ್ತು ರಾಮಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ , ಶಸ್ತ್ರಚಿಕಿತ್ಸಾ ಮತ್ತು ರಕ್ತದಾನ ಶಿಬಿರ ನಡೆಯಲಿವೆ.
ಶಿಬಿರದ ಉಚಿತ ಸೇವೆಗಳಾದ:- ಸಾಮಾನ್ಯ ವೈದ್ಯಕೀಯ ತಪಾಸಣೆ, ಶಸ್ತ್ರಚಿಕಿತ್ಸೆ, ಇಎನ್ ಟಿ ಕಿವಿ,ಮೂಗು, ಗಂಟಲು, ಕಣ್ಣಿನ ತಪಾಸಣೆ ಉಚಿತ ಕನ್ನಡಕ ಶಸ್ತ್ರಚಿಕಿತ್ಸೆ, ಮೂಳೆ ಚಿಕಿತ್ಸೆ, ಚರ್ಮ ರೋಗ, ಮಹಿಳೆಯರ ಸಂಬಂಧಿತ,ಮಕ್ಕಳ ರೋಗ,ದಂತ,ಮೂತ್ರ ರೋಗ, ಕ್ಯಾನ್ಸರ್, ಪ್ಲಾಸ್ಟಿಕ್ ಸರ್ಜರಿ, ನರರೋಗ, ಮೂತ್ರಪಿಂಡ, ಶುಗರ್ ಮತ್ತು ಬಿಪಿ, ಹೃದಯ, ಆಯುರ್ವೇದ ಸಮಾಲೋಚನೆ ಮತ್ತು ಔಷಧ, ಕಾಸ್ಮೆಟೋಲಜಿ, ಮಾತು ಮತ್ತು ಶ್ರವಣ, ಸ್ವಯಂ ಪ್ರೇರಿತ ರಕ್ತದಾನ, ವಿಷೇಶವಾಗಿ ಗರ್ಭಿಣಿ ಸ್ತ್ರೀಯರಿಗೆ ಸಾಮಾನ್ಯ ಮತ್ತು ಸಿಸೇರಿಯನ್ ಹೆರಿಗೆ ಉಚಿತ ಸೌಲಭ್ಯಗಳು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಕೆ.ಸಿ ಅಶೋಕ್ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-080 23450848, 9880933918, ಶಿಬಿರ ವಿಳಾಸ:- ಅಶೋಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಆವರಣ ಕೆಬಿ ಚಿಕ್ಕ ಮುನಿಯಪ್ಪ ಮುಖ್ಯ ರಸ್ತೆ ಕಮ್ಮಗೊಂಡನಹಳ್ಳಿ ಜಾಲಹಳ್ಳಿ ವೆಸ್ಟ್ ಬೆಂಗಳೂರು -560015.ಈ ವೇಳೆ ಡಾ.ಶ್ಯಾಮ್ ಸುಂದರ್ , ಡಾ.ಸುರೇಶ್, ಡಾ. ಲಿಂಗರಾಜು ಇದ್ದರು ಎಂದು ಟ್ರಸ್ಟಿನ ಅಧ್ಯಕ್ಷ ಕೆ.ಸಿ ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವರದಿ:- ಅಯ್ಯಣ್ಣ ಮಾಸ್ಟರ್