ಬೆಂಗಳೂರು: ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ಹಿರಿಯ ಐಎಫ್‌ಎಸ್ ಅಧಿಕಾರಿಯಾಗಿದ್ದ ಮೀನಾಕ್ಷಿ ನೇಗಿ ನೇಮಕಗೊಂಡಿದ್ದಾರೆ.
ಉತ್ತರಾಖಂಡ ಮೂಲದ ಮೀನಾಕ್ಷಿ ನೇಗಿಯವರು ಐಎಫ್‌ಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ನಿಯೋಜನೆಯಾಗಿದ್ದರು. 1989ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಅಧಿಕಾರಿಯಾಗಿ ಮೂರೂವರೆ ದಶಕದಿಂದ ಸೇವೆ ಸಲ್ಲಿಸಿದ್ದರು.
ಬಳ್ಳಾರಿ, ಮಂಡ್ಯ, ಚಿಕ್ಕಮಗಳೂರಿನಲ್ಲಿಯೂ ಡಿಸಿಎಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಮೀನಾಕ್ಷಿ ನೇಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿ ಆಗಿದ್ದರು.