Ad imageAd image

ಶಿಂದೊಳ್ಳಿ ಭಾರತಿ ಪೂಜಾರಿ ಮನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ

Bharath Vaibhav
ಶಿಂದೊಳ್ಳಿ ಭಾರತಿ ಪೂಜಾರಿ ಮನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ
WhatsApp Group Join Now
Telegram Group Join Now

ಬೆಳಗಾವಿ : -ದೇವಸ್ಥಾನದ ಕಳ್ಳತನಕ್ಕೆ ಬಂದಿದ್ದವರು ಬಾವಿಗೆ ನೂಕಿ ಸಾಯಿಸಿದ್ದಾರೆ ಎನ್ನಲಾದ ಶಿಂದೊಳ್ಳಿ ಗ್ರಾಮದ ಭಾರತಿ ಕಾನಪ್ಪ ಪೂಜಾರಿ ಮನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸಂಜೆ ಭೇಟಿ ನೀಡಿದ್ದರು.

ರೈತ ಮಹಿಳೆ ಭಾರತಿ (48) 3 ದಿನಗಳ ಹಿಂದೆ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಳು. ಗ್ರಾಮದ ಶ್ರೀ ಮಸಣವ್ವ ದೇವಸ್ಥಾನದಲ್ಲಿ ಕೆಲವರು ಕಳ್ಳತನದಲ್ಲಿ ತೊಡಗಿದ್ದಾಗ ಮಹಿಳೆ ನೋಡಿದ್ದಾಳೆ ಎಂಬ ಕಾರಣಕ್ಕೆ ಕಳ್ಳರು ಮಹಿಳೆಯನ್ನು ಬಾವಿಗೆ ನೂಕಿ ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮೃತ ಮಹಿಳೆಯ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಿದ ಸಚಿವರು, ಘಟನೆಯ ತನಿಖೆಯನ್ನು ಚುರುಕುಗೊಳಿಸುವಂತೆ ಪೊಲೀಸರಿಗೆ ಸೂಚಿಸಿದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!