ಹುಕ್ಕೇರಿ: ಇಂದು ಹುಕ್ಕೇರಿ ತಾಲೂಕ ಅಭಿವೃದ್ಧಿ ನಮ್ಮ ಹೆಚ್ಚಿನ ಶ್ರಮ ಹುಕ್ಕೇರಿ ಪಟ್ಟಣವನ್ನು ಅತೀ ಹೆಚ್ಚು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹುಕ್ಕೇರಿ ಪುರಸಭೆ ಕಾರ್ಯಾಲಯದಲ್ಲಿ ಪ್ರಗತಿ ಪರಿಶೀಲನ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಕುಡಿಯುವ ನೀರು ಸ್ವಚ್ಛತಾ ಕಾರ್ಯಗಳು ಸೇರಿ ವಿವಿಧ ಮೂಲ ಸೌಕರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಮತ್ತು ವಸತಿ ಯೋಜನೆಗಳನ್ನು ಪಲಾನುಭವಗಳಿಗೆ ಸರಿಯಾಗಿ ತಲುಪಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆವನ್ನು ನೀಡಿದರು.
ಈ ಸಭೆಯನ್ನು ಮುಗಿಸಿಕೊಂಡು ಹುಕ್ಕೇರಿ ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಿಂದ ಹಮ್ಮಿಕೊಂಡಿದೆ ಸಂಘದ ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಖಾಯಂ ನೇಮಕಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಲಾಯಿತು ಅತೀ ಹೆಚ್ಚು ಹುಕ್ಕೇರಿ ಪಟ್ಟಣವನ್ನು ಅಭಿವೃದ್ಧಿ ಮಾಡುವುದು ನಮ್ಮ ಹೆಚ್ಚಿನ ಶ್ರಮ ಎಂದು ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಯಗೌಡ ಪಾಟೀಲ, Surveillance ವಿಷ್ಣು ರೇಡೇಕರ ಪುರಸಭೆ ಅಧ್ಯಕ್ಷರಾದ ಇಮ್ರಾನ್ ಮೂಮಿನ, ಕಾಂಗ್ರೆಸ ಪಕ್ಷದ ಮುಖಂಡರು ಮೌನೇಶ್ ಪೋತದಾರ, ರಿಷಭ ಪಾಟೀಲ, ಬಸಗೌಡ ಮಗ್ಗೆನ್ನವರ, ಸ್ಥಾನಿಕ ಅಭಿಯಂತರ, ನೇಮಿನಾಥ ಖೆಮಲಾಪುರ ವೀರೇಂದ್ರ ಹಿಡಕಲ, ಸೋಮಲಿಂಗ ಪಾಟೀಲ, ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೆಶಗೋಳ