ಅಥಣಿ :-ಶಿವಶಂಕರ ಮಾರ್ಕೆಟಿಂಗ್ ಮಾಲೀಕರು ಸಿ.ಎನ. ಎಚ್ ಇಂಡಸ್ಟ್ರಿಯಲ್ ಇಂಡಿಯಾ ಪ್ರಾವೇಟ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ನ್ಯೂ ಹಾಲೆಂಡ್ ಟ್ರ್ಯಾಕ್ಟರನ ಹಾಗೂ ಸರ್ವಿಸ್ ಕೊಡುವಂತ ಟೀಮ್ ಹಾಗೂ ವಿತರಣೆ ಮಾಡುವಂತಹ ಟೀಮ್ ದೊಂದಿಗೆ ರೈತರ ಸಮ್ಮೇಳನ ಹಾಗೂ ಮಿಲನ ಹಾಗೂ ನೂತನವಾಗಿ ನ್ಯೂ ಹಾಲೆಂಡ್ ಡಾಕ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಅಥಣಿಯ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ನ್ಯೂ ಹಾಲೆಂಡ್ ಡಾಕ್ಟರ್ ಬಳಕೆ ಮಾಡಿರುವಂತಹ ಗ್ರಾಹಕರು 25ರಿಂದ 30 ವರ್ಷ ವರೆಗೆ ನಿರಂತರವಾಗಿ ಅದನ್ನೇ ತನ್ನ ಜೀವನದಲ್ಲಿ ಅಳವಡಿಸಿ ಕೊಂಡಿರುವಂತ ರೈತರಿಗೆ ಸನ್ಮಾನ ಕಾರ್ಯಕ್ರಮ ಅದರ ಜೊತೆಗೆ ಆಗಮಿಸಿರುವ ರೈತರೊಂದಿಗೆ ಆಗಬೇಕಾದ ಬದಲಾವಣೆಗೆ ಕುರಿತು ವಿಶೇಷ ಚರ್ಚಾ ಕೋಟ ಸಮ್ಮೇಳನ ಕಾರ್ಯಕ್ರಮವನ್ನು ಜರಗಿತು.
ಸಾವಿರಾರು ಜನ ರೈತರು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ತಮಗಿರುವಂತ ನ್ಯೂ ಹಾಲೆಂಡ್ ಟ್ಯಾಕ್ಟರನ ಬಗ್ಗೆ ಅನುಭವದ ಕುರಿತು ಹಂಚಿಕೊಂಡಿರು ಮೂಲಕ ತಾವು ಬಳಸುವಂತ 20 ವರ್ಷ ಸುದೀರ್ಘ ಕಾಲ ಹಾಗೂ ನ್ಯೂ ಹಾಲೆಂಡ್ ಟ್ಯಾಕ್ಟರ್ ಮೊದಲಿರುವಂತಹ ಡಾಕ್ಟರ್ ಬದ್ಲಾವಣೆಗೆ ಕುರಿತು ವಿಶೇಷ ಚರ್ಚೆ ನಡೆಸಿ ನ್ಯೂ ಹಾಲೆಂಡ್ ಟ್ರಾಕ್ಟರ್ ಉಪಯೋಗ ಮಾಡಬೇಕೆಂದು ಕರೆ ನೀಡಿದರು ರೈತರು ಈ ಕಾರ್ಯಕ್ರಮದ ಭಾಗವಹಿಸಿದ್ದಕ್ಕೆ ನಮಗೆ ಸಂತಸ ತಂದಿದೆ ಎಂದು ಹುಬ್ಬಳ್ಳಿಯ ಶ್ರೀನಿವಾಸ್ ಸರ್ ಅವರು ಹೇಳಿದರು.
ನಂತರ ವೈದ್ಯನಾಥ್ ಗಿಟ್ಟಿ ಪುಣೆ ಅವರು ಮಾತನಾಡಿ ನ್ಯೂ ಹಾಲೆಂಡ್ ಟ್ಯಾಕ್ಟರನ ಮೊದಲು ಇರುವಂತ ಬದಲಾವಣೆ ಹಾಗೂ ಈಗಿರುವಂತ ಬದಲಾವಣೆ ಆಗಿರುವುದರಿಂದ ಗ್ರಾಹಕರಿಗೆ ಯಾವ ರೀತಿ ತೊಂದರೆ ಇಲ್ಲ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ನ ಬಳಕೆ ಮಾಡುವಂತೆ ಕರೆ ನೀಡಿದರು ಜೊತೆಗೆ ಅಥಣಿಯಲ್ಲಿ ಆದಷ್ಟು ಬೇಗನೆ ಸರ್ವಿಸ್ ಸೆಂಟರ್ ತೆರೆಯುವುದಾಗಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ತರುಣ್ ಸರ್ ಹಾಗೂ ಸಾಂಗ್ಲಿಯ ಆಶಿ ಸರ್ ಬಸವರಾಜ್ ಮೈತ್ರಿ ಮೋಹನ್ ಮೇತ್ರಿ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
ವರದಿ :-ರಾಜು ವಾಘಮಾರೆ