LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಯಶವಂತಪುರ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆ ಸಮಿತಿ  ಕಚೇರಿ ಉದ್ಘಾಟನೆ: ಶಾಸಕ ಎಸ್ ಟಿ ಸೋಮಶೇಖರ್ 

Advertisement

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಇಎಲ್ ಭಾರತ ನಗರದಲ್ಲಿರುವ ಡಯಾಲಿಸಿಸ್ ಸೆಂಟರ್ ಕಟ್ಟಡದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗ್ಯಾರಂಟಿ ಅನುಷ್ಠಾನ ಸಮಿತಿಯ  ಅಧ್ಯಕ್ಷ ದೇವರಾಜು ರಾಮೇಗೌಡ ಅವರ ಕಚೇರಿಯನ್ನು ಮಾಜಿ ಸಚಿವ ಹಾಗೂ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರು ಉದ್ಘಾಟಿಸಿದರು.

news_1787579060_2_820.webp

 

 ನಂತರ ಅವರು ಮಾತನಾಡಿ ರಾಜ್ಯ ಸರ್ಕಾರದ ಯೋಜನೆಗಳಾದ ಗ್ರಹಲಕ್ಷ್ಮಿ, ಗ್ರಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ ಮತ್ತು ಯುವ ನಿಧಿ ಈ ಯೋಜನೆ ಜನರಿಗೆ ತಲುಪುತ್ತದೆ ಎಂಬುದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಯೋಜನೆಯಿಂದ ವಂಚಿತರಾದವರ ಪಟ್ಟಿ ತಯಾರಿಸಿ ನಮ್ಮ ಗಮನಕ್ಕೆ ತಂದು ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ದೇವರಾಜು ರಾಮೇಗೌಡ ಅವರಿಗೆ ನಿರ್ದೇಶನ ನೀಡಿ ಮಾತನಾಡಿದರು.
               ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ದೇವರಾಜು ರಾಮೇಗೌಡ ಸರ್ವರಿಗೂ ಸ್ವಾಗತಿಸಿದರು.

news_1787579060_2_820.webp

 

          ಈ ಸಮಾರಂಭದಲ್ಲಿ ರಾಜ್ಯ ಎಸ್ ಟಿ ಘಟಕದ ಅಧ್ಯಕ್ಷ ವಿ. ನಾಗರಾಜ್, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟ್ರಾವೆಲ್ಸ್ ಮಂಜುನಾಥ್, ಬೀದಿ ಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾಧ್ಯಕ್ಷ ಕೇಶವಮೂರ್ತಿ, ಬೆಂಗಳೂರು ಪಶ್ಚಿಮ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭಾಗ್ಯಲಕ್ಷ್ಮಿ, ಅಂದ್ರಹಳ್ಳಿ ವಾರ್ಡಿನ ಕಾಂಗ್ರೆಸ್  ಅಧ್ಯಕ್ಷ ಮುನಿರಾಜು, ಪ್ರಭಾವಿ ನಾಯಕ ಟಿ. ಪ್ರಕಾಶ್,  ಮಹಿಳಾ ಘಟಕದ ಅಧ್ಯಕ್ಷೆ ಜಲಜ,
ಪ್ರದಾನ ಕಾರ್ಯದರ್ಶಿ ಮಹಾಲಕ್ಷ್ಮಿ, ಕವಿತಾ ವಿಶ್ವಕರ್ಮ, ಯುವ ಘಟಕದ ಅಧ್ಯಕ್ಷ  ಅರುಣ್ ಬೈಲಪ್ಪ, ನಿಖಿಲ್, ಆರ್ ಕೆ ಗ್ರೂಪ್ ಮಾಲೀಕ ರಾಮಕೃಷ್ಣಣ್ಣ, ಪದ್ಮಭೂಷಣ್, ಸಲೀಂ, ಗಿರೀಶ್, ಸಿದ್ದು, ಸುರೇಶ್ ಗೌಡ್ರು ಸೇರಿದಂತೆ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಹಾಕಿ ಪಂದ್ಯಾವಳಿಯಿಂದ ಭಾರತ ನಿರ್ಗಮನ 3 ದಿನ ಮೊದಲೇ ವಿಧಾನಸಭೆ, ವಿಧಾನಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಶವಂತಪುರ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆ ಸಮಿತಿ  ಕಚೇರಿ ಉದ್ಘಾಟನೆ: ಶಾಸಕ ಎಸ್ ಟಿ ಸೋಮಶೇಖರ್ ತೆಕ್ಕಲಕೋಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ತರಬೇತಿ ಕಾರ್ಯಾಗಾರವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ,  ಉಪನ್ಯಾಸಕ ಚಂದ್ರಶೇಖರ್ ಅಮಾನತ್ತಿಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆಭಿಕ್ಷೆ ಬೇಡುತ್ತಿದ್ದ ಅಜ್ಜಿ ಸಾವು : ಮನೆಯಲ್ಲಿ ಸಿಕ್ಕಿತು ಬರೋಬ್ಬರಿ 30 ಲಕ್ಷ! ರಾಜ್ಯದಲ್ಲಿ 1,07,96,399 ಕೋಟಿ ಮತದಾರರು ಡಿಲೀಟ್ : ವಿ. ಅನ್ಬುಕುಮಾರ್ಹೆತ್ತ ತಂದೆ-ತಾಯಿಯನ್ನೇ ಅತ್ಯಂತ ಬರ್ಬರವಾಗಿ ಕೊಲೆಗೈದ ಮಗಕೊಲಂಬೊ ಟೆಸ್ಟ್ : ಉತ್ತಮ ಸ್ಥಿತಿಯಲ್ಲಿ ಭಾರತವೃಶಬ್ ಪಂತ್ ಇನ್ನೊಂದು ವಿಕ್ರಮ