ಆಗಸ್ಟ್ 26, 2026 ರಂದು ನಡೆಯಲಿರುವ ಈದ್ ಮಿಲಾದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ರಾಜ್ಯದ ವಿವಿಧೆಡೆ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಅಂದಹಾಗೆ ವಿಜಯಪುರ ಜಿಲ್ಲೆಯ ಚಡಚಣ ಠಾಣೆಯಲ್ಲಿ ಸಿ.ಪಿ.ಐ ಮನಗೋಳಿ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು ಹಬ್ಬವನ್ನು ಶಾಂತಿಯಿಂದ ಆಚರಿಸಲು ಸಹಕರಿಸುವಂತೆ ಅವರು ಕೋರಿದರು. ಎಲ್ಲರೂ ಕಾನೂನು ಸುವ್ಯವಸ್ಥೆ ಪಾಲಿಸಬೇಕು ಎಂದು ಸೂಚಿಸಿದರು.

.
ಮೆರವಣಿಗೆ ಮಾರ್ಗ: ನಿಗದಿತ ಮಾರ್ಗಗಳಲ್ಲಿ ಮಾತ್ರ ಮೆರವಣಿಗೆ ನಡೆಸಬೇಕು ಮತ್ತು ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗ
ಸೌಹಾರ್ದತೆಗೆ ಧಕ್ಕೆ ತರುವ ಅಥವಾ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಆಡಳಿತ ವರ್ಗದ ಸಹಕಾರ: ಸಾರ್ವಜನಿಕರು ಮತ್ತು ವಿವಿಧ ಸಮುದಾಯಗಳ ಮುಖಂಡರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಹಬ್ಬದ ಯಶಸ್ಸಿಗೆ ಸಹಕರಿಸಬೇಕು. ನುಡಿದಿದ್ದಾರೆ.


ಈ ಸಂದರ್ಭದಲ್ಲಿ ಮಲ್ಲು ಧೋತ್ರೆ. ರಾಜು ಕೋಳಿ. ಮೃತ್ಯುಂಜಯ ನದಾಫ್. ಫಯಾಜ್ ಮುಲ್ಲಾ. ಬಾಬುಸಾಹೇಬ್ ಕೊಂಕಣಿ. ಅಮೀನ್ ಸಾಬ್ ಟಪಾಲ್. ಸಲೀಂ ಅರಿಕೇರಿ. ಬಾಲಾಜಿ ಗಾಡಿ ವಾಟರ್. ಅಜೀದ್ ಮುಸ್ತಿ. ದೇವಪ್ಪ ಪಾಟೀಲ. ಮುಕ್ತಾರ್ ಕಡಿಕೆ. ಆಮೀನ್ ಸಾಬ್ ಅತ್ತಾರ್. ಮುಬಾರಕ್ ನದಾಫ್. ಭಾಷಾ ಸಾಬ್ ಬಿಳಿಗಿ. ಮೈಬೂಬಸಾಬ್ ಸೌದಾಗರ್. ಧರ್ಮೋ ಬನ್ಸೋಡೆ. ಸಂಜು ಪರಿಟ್.
ಮಿರಾ ಅತ್ತಾರ ಉಪಸ್ಥಿತರಿದ್ದರು.


