LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ವಿದ್ಯಾರ್ಥಿನಿಯರ ಜೊತೆ ಸ್ನಾನ ಮಾಡಿದ ಪ್ರಾಂಶುಪಾಲ ಅಮಾನತು : ವಿಡಿಯೋ ವೈರಲ್

Advertisement

ರಾಜಸ್ಥಾನದ ಅಲ್ವಾರ್‌ನಲ್ಲಿ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್‌ ಲಾಲ್‌ಚಂದ್‌ ಮೀನಾ ಅವರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಡ್ಯಾಂಗೆ ಕರೆದೊಯ್ದು, ವಿದ್ಯಾರ್ಥಿನಿಯರೊಂದಿಗೆ ನೀರಿಗೆ ಇಳಿದಿರುವ ವಿಡಿಯೋ ವೈರಲ್‌ ಆಗಿದೆ.

ಸುರಕ್ಷತಾ ನಿಯಮ ಉಲ್ಲಂಘನೆ ಹಾಗೂ ಅನುಚಿತ ವರ್ತನೆ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅವರನ್ನು ಅಮಾನತುಗೊಳಿಸಿ, ಪ್ರಕರಣದ ಕುರಿತು ಇಲಾಖಾ ತನಿಖೆಗೆ ಆದೇಶಿಸಿದೆ.

ಶಾಲೆಯ ಪ್ರಿನ್ಸಿಪಾಲ್‌ ಲಾಲ್‌ಚಂದ್‌ ಮೀನಾ ಅವರ ವರ್ತನೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. 11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರೊಂದಿಗೆ ಡ್ಯಾಂಗೆ ಇಳಿದು ಈಜುತ್ತಿದ್ದ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಪದಕ್‌ ಛಾಪ್ಲಿ ಪ್ರದೇಶದ ಸರ್ಕಾರಿ ಸೀನಿಯರ್‌ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್‌ ಲಾಲ್‌ಚಂದ್‌ ಮೀನಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಬಿಕಾನೇರ್‌ನ ಪ್ರೌಢ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಈ ಘಟನೆ ಆಗಸ್ಟ್‌ 15ರಂದು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಮುಗಿದ ಬಳಿಕ ಪ್ರಿನ್ಸಿಪಾಲ್‌ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಲೆಯಿಂದ ಸುಮಾರು ಎರಡು ಕಿಲೋಮೀಟರ್‌ ದೂರದಲ್ಲಿರುವ ಭರಾಜ್‌ ಡ್ಯಾಂಗೆ ಕರೆದೊಯ್ದಿದ್ದರು. ವಿದ್ಯಾರ್ಥಿಗಳಿಗೆ ಈಜು ಕಲಿಸುವ ಉದ್ದೇಶದಿಂದ ಅವರನ್ನು ಅಲ್ಲಿಗೆ ಕರೆದೊಯ್ಯಲಾಗಿತ್ತು ಎಂದು ಕೆಲವು ವರದಿಗಳು ತಿಳಿಸಿವೆ.

ಆದರೆ, ವಿದ್ಯಾರ್ಥಿಗಳನ್ನು ಡ್ಯಾಂನ ನೀರಿಗೆ ಇಳಿಸುವ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಡ್ಯಾಂನಲ್ಲಿ ಸುಮಾರು 11 ಅಡಿ ಆಳದ ನೀರಿದ್ದು, ಅಲ್ಲಿ ಈಜುವುದು ಅಪಾಯಕಾರಿ ಹಾಗೂ ಸ್ನಾನಕ್ಕೆ ಅನುಮತಿ ಇಲ್ಲ ಎಂದು ವರದಿಗಳು ಹೇಳಿವೆ. ವಿದ್ಯಾರ್ಥಿಗಳಿಗೆ ಲೈಫ್‌ ಜಾಕೆಟ್‌ ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳನ್ನು ಒದಗಿಸಿರಲಿಲ್ಲ ಎಂಬ ಆರೋಪವೂ ಇದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೃಶಬ್ ಪಂತ್ ಇನ್ನೊಂದು ವಿಕ್ರಮ CPI ನೇತೃತ್ವದಲ್ಲಿ ಈದ್ ಮಿಲಾದ್ ಶಾಂತಿ ಸಭೆಕೊಲಂಬೊ ಟೆಸ್ಟ್ :ಬ್ರಹತ್ ಮೊತ್ತದತ್ ಭಾರತಬಸ್‌ಗಳಲ್ಲಿ ಉಚಿತ ಪ್ರಯಾಣ, ವರ್ಷಕ್ಕೆ 3 ಉಚಿತ ಸಿಲಿಂಡರ್‌: CM ವಿಜಯ್‌ 'ಸೂಪರ್‌ ಸಿಕ್ಸ್‌' ಘೋಷಣೆಸೆಲ್ಫಿ' ಕ್ಲಿಕ್ಕಿಸಿಕೊಳ್ಳಲು ಬಂದು ರಾಹುಲ್ ಗಾಂಧಿ ಕೆನ್ನೆಗೆ ಮುತ್ತಿಟ್ಟ ಯುವತಿ : ವಿಡಿಯೋ ವೈರಲ್ ನಿಡಗುಂದಿ ಕೇನಾಲ್‌ಗೆ ಜಾರಿ ಬಿದ್ದು ವ್ಯಕ್ತಿ ನಾಪತ್ತೆ: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದ:ಈದ್ ಮಿಲಾದ್ ವೇಳೆ ಪಾಕಿಸ್ತಾನಿ ಹಾಡು ವೈರಲ್ವಿದ್ಯಾರ್ಥಿನಿಯರ ಜೊತೆ ಸ್ನಾನ ಮಾಡಿದ ಪ್ರಾಂಶುಪಾಲ ಅಮಾನತು : ವಿಡಿಯೋ ವೈರಲ್ಈಸ್ಟ್ ಬೆಂಗಾಲ್ ಗೆ ಡುರಾಂಡ್ ಕಪ್ ಕಿರೀಟ ಕರ್ನಾಟಕ ಯುವಸೇನೆ ಸಮಿತಿವತಿಯಿಂದ  ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಮಹೇಶ್ ರೆಡ್ಡಿ