ಜೈಪುರ: ಮಿಸ್ ಯೂನಿವರ್ಸ್ ಇಂಡಿಯಾ 2026ರ ಗ್ರ್ಯಾಂಡ್ ಫಿನಾಲೆಯಲ್ಲಿ ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೋ ವಿಜೇತರಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಜೈಪುರದಲ್ಲಿ ನಡೆದ ಅದ್ಧೂರಿ ಸ್ಪರ್ಧೆಯಲ್ಲಿ 53 ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಅಂತಿಮವಾಗಿ ಕಾಜಿಯಾ ಲಿಜ್ ಮೆಜೋ ಅವರು ಪ್ರಶಸ್ತಿ ಗೆದ್ದಿದ್ದಾರೆ.
ಮಿಸ್ ಯೂನಿವರ್ಸ್ ಇಂಡಿಯಾ 2025ರ ವಿಜೇತೆ ಮನಿಕಾ ವಿಶ್ವಕರ್ಮ ಅವರು ಕಾಜಿಯಾ ಲಿಜ್ ಮೆಜೋ ಅವರಿಗೆ ಕಿರೀಟ ತೊಡಿಸಿದರು. ಅಂತಿಮ ಸುತ್ತಿನಲ್ಲಿ ಕೇರಳ ಮತ್ತು ತಮಿಳುನಾಡಿನ ಸ್ಪರ್ಧಿಗಳು ಅಗ್ರ ಎರಡು ಸ್ಥಾನಗಳನ್ನು ಪಡೆದುಕೊಂಡರು.
ಟಾಪ್-5 ಸ್ಪರ್ಧಿಗಳ ವಿವರ
ವಿಜೇತೆ: ಕಾಜಿಯಾ ಲಿಜ್ ಮೆಜೋ - ಕೇರಳ
ಫಸ್ಟ್ ರನ್ನರ್ ಅಪ್: ವೈಷ್ಣವಿ ಗಣೇಶ್ - ತಮಿಳುನಾಡು
ಸೆಕೆಂಡ್ ರನ್ನರ್ ಅಪ್: ಅನುಶ್ರೀ ಸತವಾಲೇಕರ್ - ಗುಜರಾತ್
ಥರ್ಡ್ ರನ್ನರ್ ಅಪ್: ತೇಜಸ್ವಿನಿ ಶ್ರೀವಾಸ್ತವ - ಮಹಾರಾಷ್ಟ್ರ


