ಲಕ್ನೋ: ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ ಎಂಬ ಮಾತಿದೆ. ಆದ್ರೆ ಇಂದು ದೇವರಿಗೆ ವಂಚನೆ ಮಾಡುವ ಕೆಲಸಗಾರರನ್ನು ಸರ್ಕಾರಿ ಇಲಾಖೆ ಹೊಂದಿದೆ.
ಉತ್ತರ ಪ್ರದೇಶದ ಬಸ್ತಿ ಮಂಡಲದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂಜಿನಿಯರ್‌ಗಳು AI ಬಳಸಿ ಹಗರಣ ನಡೆಸಿದ್ದಾರೆ.
AI ಫೋಟೋ ಬಳಸಿ ಒಳಚರಂಡಿ ಕಾಮಗಾರಿಯ ಬಿಲ್ ಕ್ಲಿಯರ್ ಮಾಡಿಕೊಂಡಿದ್ದಾರೆ.ಕಾಲುವೆ ಸ್ವಚ್ಛಗೊಳಿಸೋದು, ಒಡ್ಡು ನಿರ್ಮಾಣ, ದುರಸ್ತಿ ಕಾರ್ಯದಲ್ಲಿ AI ಚಮತ್ಕಾರ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಕಬಳಿಸಿದ್ದಾರೆ.
ಇಡೀ ಜಿಲ್ಲೆಯಲ್ಲಿ ಒಡ್ಡುಗಳನ್ನು ನಿರ್ಮಾಣ ಮಾಡುವ ಇಲಾಖೆಯಲ್ಲಿ ಬಜೆಟ್‌ನ ಶೇ.26ಕ್ಕಿಂತ ಅಂದ್ರೆ ₹ 1 ಕೋಟಿ 3 ಲಕ್ಷ 81 ಸಾವಿರ 62 ರೂಪಾಯಿ ಮೌಲ್ಯದ ಕಾಮಗಾರಿ ನಡೆಸಲಾಗಿದೆ. ಆದ್ರೆ ಈ ಎಲ್ಲಾ ಕಾಮಗಾರಿಗಳು ದಾಖಲೆಯಲ್ಲಿ ಮಾತ್ರ ದಾಖಲಾಗಿವೆ.
ಆದ್ರೆ ನಿಜವಾಗಿ ಯಾವುದೇ ಕಾಮಗರಿ ನಡೆಯದಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಸರ್ಕಾರಕ್ಕೆ ದೂರು ದಾಖಲಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಹಗರಣ ಸಂಬಂಧ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅಮರ್ ಬಹದ್ದೂರ್ ಸಿಂಗ್ ಎಂಬವರು ಬಸ್ತಿ ವಿಭಾಗೀಯ ಆಯುಕ್ತ ಅಖಿಲೇಶ್ ಸಿಂಗ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಅಮರ್ ಬಹದ್ದೂರ್ ಸಿಂಗ್ ಪತ್ರದಲ್ಲಿ ಆಡಳಿತ ಸಿಬ್ಬಂದಿ ಮತ್ತು ಸರ್ಕಾರವನ್ನು ನೇರವಾಗಿ ಟೀಕಿಸಿದ್ದಾರೆ. ಅಮರ್ ಅವರ ಈ ಪತ್ರ ನೀರಾವರಿ ಇಲಾಖೆಯ ಕಾರಿಡಾರ್‌ಗಳಲ್ಲಿ ಕೋಲಾಹಲ ಉಂಟಾಗಿದೆ.

