ನವದೆಹಲಿ: ಪತಿಯ ಎರಡನೇ ಮದುವೆಯ ವಿಷಯ ತಿಳಿದು ಆಕ್ರೋಶಗೊಂಡ ಪತ್ನಿಯೊಬ್ಬಳು, ಆತ ಮಲಗಿದ್ದಾಗ ಖಾಸಗಿ ಭಾಗವನ್ನು ಕತ್ತರಿಸಿ ತೀವ್ರವಾಗಿ ವಿರೂಪಗೊಳಿಸಿರುವ ಆಘಾತಕಾರಿ ಘಟನೆಯೊಂದು ಬಾಂಗ್ಲಾದೇಶದ ಫರೀದ್‌ಪುರದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಪತಿಯು ತನಗೆ ತಿಳಿಸದೆ ಎರಡನೇ ಮದುವೆಯಾಗಿದ್ದ ವಿಷಯ ಪತ್ನಿಗೆ ತಿಳಿದಿದೆ. ಇದರಿಂದ ತೀವ್ರ ಕೋಪ ಮತ್ತು ಪ್ರತೀಕಾರದ ಭಾವನೆಗೆ ಒಳಗಾದ ಆಕೆ, ಪತಿ ಗಾಢ ನಿದ್ರೆಯಲ್ಲಿದ್ದಾಗ ಈ ಭೀಕರ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಘಟನೆಯ ನಂತರ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ದಾರುಣ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.


