ಬೆಂಗಳೂರು: ಸಾರಿಗೆ ಬಸ್ ಗಳಿಗೆ ಇಂಧನ ಹಾಅಕಲು ಹಣವಿಲ್ಲದೇ ನಿಂತಲ್ಲೇ ನಿಂತಿದ್ದ ಬಸ್ ಗಳ ಸ್ಥಿತಿ ಕಂಡು ಎಚ್ಚೆತ್ತ ರಾಜ್ಯ ಸರ್ಕಾರ ಕೊನೆಗೂ ಇಂಧನ ಪಾವತಿಗಾಗಿ ನಾಲ್ಕು ಸಾಅರಿಗೆ ನಿಗಮಗಳಿಗೆ ಹಣ ಬಿಡುಗಡೆ ಮಾಡಿದೆ.
ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಕೆ.ಕೆ.ಆರ್.ಟಿ.ಸಿ,ಎನ್ ಡಬ್ಲ್ಯೂ ಕೆ.ಎಸ್.ಆರ್.ಟಿಸಿ ನಾಲ್ಕು ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ 100 ಕೋಟಿ ಹಣ ಅನುದಾನದ ಬಿಡುಗಡೆ ಮಾಡಿದೆ.
2026-27ನೇ ಸಾಲಿನ ಬಜೆಟ್ ನಲ್ಲಿ ಅನುದನ ಬಾಳಕೆಗೆ ಅನುಮತಿ ನೀಡಲಾಗಿದ್ದು, ಕೆ.ಎಸ್.ಆರ್.ಟಿ.ಸಿಗೆ 18.90 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
ಬಿಎಂಟಿಸಿಗೆ 62.53 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಎನ್ ಡಬ್ಲ್ಯೂ ಕೆ.ಎಸ್.ಆರ್.ಟಿ.ಸಿಗೆ 7.96 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕೆ.ಕೆ.ಆರ್.ಟಿ.ಸಿಗೆ 10.61 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
ಈ ಮೂಲಕ ಡೀಸೆಲ್ ಪಾವತಿಗೆ ಸಾರಿಗೆ ನಿಗಮಗಳಿಗೆ ಬಾಕಿ ಹಣ ಬಿಡುಗಡೆಯಾದಂತಾಗಿದೆ. ಷರತ್ತುಗಳ ಅನ್ವಯ ಅನುದಾನ ಬಳಸಲು ಸರ್ಕಾರ ಸೂಚನೆ ನೀಡಿದೆ.
ಈ ಬಗ್ಗೆ ಅಕ್ಟೋಬರ್ 8 ರಮ್ದು ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಅಕ್ಟೋಬರ್ 9 ರಂದು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಸಾರಿಗೆ ಇಲಾಖೆಯಲ್ಲಿ ಇಂಧನ ಪಾವತಿಗೆ ಹಣವಿಲ್ಲದೇ, ಡೀಸೆಲ್ ಖಾಲಿಯಾಗಿ ನಾಲ್ಕು ಸಾರಿಗೆ ನಿಗಮಗಳ ಬಸ್ ಗಳು ನಿಂತಲ್ಲೇ ನಿಂತಿದ್ದವು. ಬಸ್ ಸಂಚಾರವಿಲ್ಲದೇ ಪರದಾಡಿದ್ದ ಪ್ರಯಾಣಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಸರ್ಕಾರ ಇದೀಗ ಹಣ ಬಿಡುಗಡೆ ಮಾಡಿದೆ


