LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶ್ರೀ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ.17 ನೇ ವರ್ಷದ ಸಾಮಾನ್ಯ ಸಭೆ

Advertisement

ಮಾನ್ವಿ: ಪಟ್ಟಣದ ಶ್ರೀ ನೀಲಕಂಠೇಶ್ವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಶ್ರೀ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ.17 ನೇ ವರ್ಷದ ಸಾಮಾನ್ಯ ಸಭೆಯನ್ನು ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ  ಎಂ.ದೊಡ್ಡಬಸವರಾಜಗೌಡ ಉದ್ಘಟಿಸಿ ಮಾತನಾಡಿ ಜಿಲ್ಲೇಯಲ್ಲಿ 465 ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಘಗಳಿದ್ದು ಅವುಗಳಲ್ಲಿ 370 ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಘಗಳು ಸಕ್ರಿಯವಾಗಿದ್ದು ಲಾಭದತ್ತ ಸಾಗುತ್ತಿವೆ.ಕೇಂದ್ರ ಸರಕಾರ ಸಹಕಾರಿ ಕ್ಷೇತ್ರದಿಂದ ದೇಶದ ಹಾಗೂ ರಾಜ್ಯದ ಅರ್ಥಿಕ ಅಭಿವೃದ್ದಿಯಲ್ಲಿ ಮಹಾತ್ವದ ಪಾತ್ರ ವಹಿಸುತ್ತಿರುವುದನ್ನು ಗುರುತಿಸಿ ಸಹಕಾರಿ ಕ್ಷೇತ್ರಕ್ಕಾಗಿ ಪ್ರತ್ಯಕ ಸಚಿವಾಲಯ ಹಾಗೂ ಸಹಕಾರಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವ ಮೂಲಕ ಸಹಕಾರಿ ಕ್ಷೇತ್ರವನ್ನು ಬಲಪಡಿಸುತ್ತಿದೆ. ಎಲ್ಲಾ ಸಹಕಾರಿ ಸಂಘಗಳು ತಮ್ಮ ಸಂಸ್ಥೆಗಳಲ್ಲಿ ಅತ್ಯಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಸದಸ್ಯರಿಗೆ ಉತ್ತಮ ಆರ್ಥಿಕ ಸೇವೆಯನ್ನು ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು ಸಹಕಾರಿಗಳ ಮೂಲಕ ಇಂದು ಸುಲಾಭವಾಗಿ ಜನರಿಗೆ ತಮ್ಮ ಆರ್ಥಿಕ ಅಗತ್ಯಗಳಿಗೆ ಅನುಗುಣವಾಗಿ ಸುಲಾಭವಾಗಿ ಸಾಲ ಸೌಲಭ್ಯದ ಜೋತೆಗೆ ಉಳಿತಾಯ,ಹಾಗೂ ಸುರಕ್ಷಿತ ಠೇವಣಿ ಇಡುವುದಕ್ಕೆ ಅವಕಾಶ ಕಲ್ಪಿಸಿದೆ. ಒಂದು ಸಹಕಾರಿ ಅಭಿವೃದ್ದಿ ಯಾಗಬೇಕಾದರೆ ಸಹಕಾರಿಯ ಆಡಳಿತ ಮಂಡಳಿ,ಸಿಬ್ಬಂದಿ ,ಸದಸ್ಯರು,ಠೇವಣಿದಾರರು,ಷೇರುದಾರರು, ಸಾಲಗಾರರು ಕೂಡ ಮುಖ್ಯವಾಗುತ್ತರೆ. ಜಿಲ್ಲೇಯಲ್ಲಿ ಸಹಕಾರಿ ಸಂಘಗಳ ಮೂಲಕ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವುದರ ಜೊತೆಗೆ ಸಮಾಜಿಕ ಅಭಿವೃದ್ದಿಯಲ್ಲಿ ಮಹಾತ್ವದ ಕೊಡುಗೆಯನ್ನು ಸಹಕಾರಿಗಳು ಸಂಘಗಳು ನೀಡುತ್ತಿವೆ ಎಂದು ತಿಳಿಸಿದರು.

news_1787761906_0_662.webp

 

ಸಹಕಾರಿಯ ಅಧ್ಯಕ್ಷರಾದ  ವೆಂಕಟರಾಯಗೌಡ ಪಾಟೀಲ್  ಮಾತನಾಡಿ ಸಹಕಾರಿಯು ಮಾನ್ವಿ ಮತ್ತು ಸಿರವಾರ ಶಾಖೆಗಳ ಮೂಲಕ ಕಳೆದ 17 ವರ್ಷಗಳಿಂದ ಸಹಕಾರಿಯ ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡುತ್ತ ಬಂದಿದೆ. 2025-26 ನೇ ಸಾಲಿನಲ್ಲಿ 24.85 ಕೋಟಿ ದುಡಿಯುವ ಬಂಡವಾಳದೊಂದಿಗೆ 18.91 ಕೋಟಿಸದಸ್ಯರಿಗೆ ವಿವಿಧಸಾಲಗಳನ್ನು ನೀಡಲಾಗಿದು. 128 ಕೋಟಿ ವಾರ್ಷಿಕ ವಾಹಿವಾಟು ನಡೆಸಿ 1ಕೋಟಿ 65 ಲಕ್ಷ ನಿವ್ವಳ ಲಾಭವನ್ನು ಸಹಕಾರಿಯು ಗಳಿಸಿದೆ.ಸದಸ್ಯರಿಂದ 16ಕೋಟಿ 49 ಲಕ್ಷ ಠೇವಣಿಗಳನ್ನು ಸಂಗ್ರಹಿಸಲಾಗಿದೆ ಸಹಕಾರಿಯ ಅಭಿವೃದ್ದಿಗೆ  ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ಕೋರಿದ್ದಾರು.
ಸಹಕಾರಿಯ ಉತ್ತಮ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಕಾರ್ಯಕ್ರಮದಲ್ಲಿ  ಜಿಲ್ಲಾ ಸೌಹಾರ್ಧ ಸಹಕಾರಿ ಅಭಿವೃದ್ದಿ ಅಧಿಕಾರಿ ನಟರಾಜ, ಮುಖಂಡರಾದ ಕೆ.ಬಸವಂತಪ್ಪ, ಸಹಕಾರಿಯ ಉಪಾಧ್ಯಕ್ಷರಾದ ಅಮರೇಗೌಡ.ಜೆ, ನಿರ್ದೇಶಕರಾದ ಮಲ್ಲನಗೌಡ ಪಾಟೀಲ್ ನಕ್ಕುಂದಿ, ಶಿವರಾಜ ಪಾಟೀಲ್ ವಕೀಲರು, ನಿವೃತ್ತ ಪಿ.ಎಸ್.ಐ. ಶರಶ್ಚಂದ್ರಯಾದವ್ ,ಶೇಖರಪ್ಪ ಪಾಟೀಲ್,ಶರಣಬಸಪ್ಪ.ಕೆ, ಸಹಕಾರಿಯ ಸಿ.ಈ.ಓ. ಬಸವರಾಜ ಪಾಟೀಲ್,ವ್ಯವಸ್ಥಾಪಕರಾದ ಅಮರೇಗೌಡ.ಜಿ ಸೇರಿದಂತೆ ಸಹಕಾರಿಯ ಆಡಳಿತಮಂಡಳಿಯವರು ಸಹಕಾರಿಯ ಸದಸ್ಯರು,ಸಿಬ್ಬಂದಿಗಳು ಇದ್ದರು.

ವರದಿ : ಆಂಜನೇಯ ನಸಲಾಪುರ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ.17 ನೇ ವರ್ಷದ ಸಾಮಾನ್ಯ ಸಭೆಅಕ್ರಮ ಚಟುವಟಿಕೆಗಳ ವಿರುದ್ಧ ಸತತವಾಗಿ ಹೋರಾಟ ಮಾಡಲಾಗುವುದು : ಗುರುರಾಜ ನಾಗಲಾಪುರಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜನ್ಮದಿನ ಅಂಗವಾಗಿ ಮುಸ್ಲಿಂ ಸಮುದಾಯದವರಿಂದ ಮೆರವಣಿಗೆಜಾಕೋವೀಕ್ - ಸೇಬೆಲೆಮ್ಕಾ ಜೋಡಿಗೆ ಸೋಲುನೇಪಾಳದಲ್ಲಿ ಭೀಕರ ಪ್ರವಾಹ : 22 ಜನರ ದುರ್ಮರಣ, 133 ಮಂದಿ ಭಾರತೀಯರು ನಾಪತ್ತೆತುಮಕೂರು ಜಿಲ್ಲೆಯ ಹಾಲಿಗೆ ಅಂತರಾಜ್ಯದಲ್ಲೂ ಬೇಡಿಕೆ : ಸಿ.ವಿ.ಮಹಲಿಂಗಯ್ಯಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ : ಮೂವರು ಸವಾರರು ಸ್ಥಳದಲ್ಲೇ ಸಾವು ಕರ್ನಾಟಕ ಮಾದರ ಮಹಾಸಭೆಗೆ  ಸರ್ಕಾರಿ ಭೂಮಿ ಮಂಜೂರುದೆಹಲಿಗೆ ಹೊರಟ ಸತೀಶ್ ಜಾರಕಿಹೊಳಿ : ಕುತೂಹಲ ಮೂಡಿಸಿದ ಸಚಿವರ ನಡೆ ಕೊಲಂಬೊ ಟೆಸ್ಟ್ : ಗೆಲುವಿನತ್ತ ಮುಖ ಮಾಡಿದ ಭಾರತ