LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕರ್ನಾಟಕ ಮಾದರ ಮಹಾಸಭೆಗೆ  ಸರ್ಕಾರಿ ಭೂಮಿ ಮಂಜೂರು

ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ರವಿಕುಮಾರ ಹೊಸಮನಿ ಅಭಿನಂದನೆ

Advertisement

ವಿಜಯಪುರ: ಕರ್ನಾಟಕ ಮಾದರ ಮಹಾಸಭೆಗೆ 12 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿರುವ ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ರವಿಕುಮಾರ ಹೊಸಮನಿ ಸ್ವಾಗತಿಸಿ, ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಮಾದರ–ಮಾದಿಗ ಸಮುದಾಯದ ಸಬಲೀಕರಣ ಹಾಗೂ ಅಭಿವೃದ್ಧಿಗೆ ಕರ್ನಾಟಕ ಮಾದರ ಮಹಾಸಭೆಗೆ 12 ಎಕರೆ ಸರ್ಕಾರಿ ಭೂಮಿ ಮಂಜೂರು ಮಾಡಿರುವುದು ಅತ್ಯಂತ ಮಹತ್ವದ ಹಾಗೂ ದಿಟ್ಟ ನಿರ್ಧಾರವಾಗಿದೆ. ಈ ನಿರ್ಧಾರವು ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರಗತಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು, ಹಿರಿಯ ಸಚಿವರಾದ ಕೆ.ಎಚ್. ಮುನಿಯಪ್ಪ, ಶೋಷಿತರ ಗಟ್ಟಿ ಧ್ವನಿಯಾಗಿರುವ ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಲೋಕಸಭಾ ಸದಸ್ಯ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವ ಶಿವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನಾ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ ಅವರನ್ನು ಅಭಿನಂದಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.
ಸರ್ಕಾರದ ಈ ಮಹತ್ವದ ನಿರ್ಧಾರವು ಮಾದರ–ಮಾದಿಗ ಸಮುದಾಯದ ಒಗ್ಗಟ್ಟು, ಸಂಘಟನೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ರವಿಕುಮಾರ ಹೊಸಮನಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ವರದಿ: ಸಾಯಬಣ್ಣ ಮಾದರ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ.17 ನೇ ವರ್ಷದ ಸಾಮಾನ್ಯ ಸಭೆಅಕ್ರಮ ಚಟುವಟಿಕೆಗಳ ವಿರುದ್ಧ ಸತತವಾಗಿ ಹೋರಾಟ ಮಾಡಲಾಗುವುದು : ಗುರುರಾಜ ನಾಗಲಾಪುರಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜನ್ಮದಿನ ಅಂಗವಾಗಿ ಮುಸ್ಲಿಂ ಸಮುದಾಯದವರಿಂದ ಮೆರವಣಿಗೆಜಾಕೋವೀಕ್ - ಸೇಬೆಲೆಮ್ಕಾ ಜೋಡಿಗೆ ಸೋಲುನೇಪಾಳದಲ್ಲಿ ಭೀಕರ ಪ್ರವಾಹ : 22 ಜನರ ದುರ್ಮರಣ, 133 ಮಂದಿ ಭಾರತೀಯರು ನಾಪತ್ತೆತುಮಕೂರು ಜಿಲ್ಲೆಯ ಹಾಲಿಗೆ ಅಂತರಾಜ್ಯದಲ್ಲೂ ಬೇಡಿಕೆ : ಸಿ.ವಿ.ಮಹಲಿಂಗಯ್ಯಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ : ಮೂವರು ಸವಾರರು ಸ್ಥಳದಲ್ಲೇ ಸಾವು ಕರ್ನಾಟಕ ಮಾದರ ಮಹಾಸಭೆಗೆ  ಸರ್ಕಾರಿ ಭೂಮಿ ಮಂಜೂರುದೆಹಲಿಗೆ ಹೊರಟ ಸತೀಶ್ ಜಾರಕಿಹೊಳಿ : ಕುತೂಹಲ ಮೂಡಿಸಿದ ಸಚಿವರ ನಡೆ ಕೊಲಂಬೊ ಟೆಸ್ಟ್ : ಗೆಲುವಿನತ್ತ ಮುಖ ಮಾಡಿದ ಭಾರತ