LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

20 ರೂ. ಕಚೋರಿ ತಿನ್ನಲು ಹೋಗಿ 20 ಲಕ್ಷ ರೂ. ಕಳೆದುಕೊಂಡ ಉದ್ಯಮಿ

Advertisement

ಜೈಪುರ: ಉದ್ಯಮಿಯೊಬ್ಬರು 20 ರೂಪಾಯಿಯ ಕಚೋರಿ ತಿನ್ನಲು ಹೋಗಿ 20 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಜೈಪುರದಲ್ಲಿ, ಉದ್ಯಮಿಯೊಬ್ಬರಿಗೆ 20 ರೂಪಾಯಿಯ ಕಚೋರಿ ಅತ್ಯಂತ ದುಬಾರಿ ತಿಂಡಿಯಾಗಿ ಪರಿಣಮಿಸಿದೆ.

ಹಸಿವು ನೀಗಿಸಿಕೊಳ್ಳಲು ಅವರು ವಿರಾಮ ತೆಗೆದುಕೊಂಡಿದ್ದಾಗ, ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು 20 ಲಕ್ಷ ರೂಪಾಯಿಗಳಿದ್ದ ಅವರ ಬ್ಯಾಗ್ ಅನ್ನು ಕದ್ದೊಯ್ದಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಉದ್ಯಮಿ ಪ್ಲೇಟ್ ನಲ್ಲಿದ್ದ ಕಚೋರಿ ಮುಗಿಯಿತು, ಜೊತೆಗೆ ಬ್ಯಾಅಗ್ ನಲ್ಲಿದ್ದ ಹಣವೂ ಮಾಯವಾಯಿತು. 20 ರೂಪಾಯಿ ಕಚೋರಿಗೆ ಆಸೆಪಟ್ಟು 20 ಲಕ್ಷ ಕಳೆದುಕೊಂಡಿದ್ದಕ್ಕೆ ಉದ್ಯಮಿ ಕಂಗಾಲಾಗಿದ್ದಾರೆ.

ಚಂಪಾಲಾಲ್ ಎಂಬ ಉದ್ಯಮಿಯೊಬ್ಬರು ಕಚೋರಿ ತಿನ್ನಲು ತಮ್ಮ ಬೈಕ್ ನಿಲ್ಲಿಸಿ, ಹಣವಿದ್ದ ಬ್ಯಾಗ್ ಅನ್ನು ಬೈಕ್ ನ ಮುಂಭಾಗದಲ್ಲಿ ಇರಿಸಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ನಹರ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಿದೆ. ಚಂಪಾಲಾಲ್ ಅವರು ಶಂಕಿತರನ್ನು ಬೆನ್ನಟ್ಟಿದರು, ಸ್ಥಳೀಯರು ಕೂಡ ಅವರಿಗೆ ಸಾಥ್ ನೀಡಿದರು, ಆದರೆ ಆ ಇಬ್ಬರು ವ್ಯಕ್ತಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಘಟನೆಯ ವಿಡಿಯೋದಲ್ಲಿ, ಚಂಪಾಲಾಲ್ ಅವರು ತಮ್ಮ ಬೈಕ್ ಮೇಲೆ ಕುಳಿತು ನಿರಾಳವಾಗಿ ಕಚೋರಿ ಸವಿಯುತ್ತಿರುವುದು ಕಾಣಿಸುತ್ತದೆ. ಅವರು ಕಚೋರಿ ತಿನ್ನುತ್ತಿದ್ದಂತೆಯೇ, ಮತ್ತೊಂದು ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಪಕ್ಕದಲ್ಲೇ ನಿಲ್ಲುತ್ತಾರೆ.

ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ, ಹಣವಿದ್ದ ಬ್ಯಾಗ್ ಅನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. ಕೈಯಲ್ಲಿ ಕಚೋರಿಯನ್ನು ಹಿಡಿದುಕೊಂಡೇ ಚಂಪಾಲಾಲ್ ಆ ವ್ಯಕ್ತಿಗಳನ್ನು ಬೆನ್ನಟ್ಟಲು ಪ್ರಾರಂಭಿಸುತ್ತಾರೆ.

ಹೆಲ್ಮೆಟ್ ಧರಿಸಿದ್ದ ಆ ಇಬ್ಬರು ವ್ಯಕ್ತಿಗಳನ್ನು ಗುರುತಿಸಲು ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಚಂಪಾಲಾಲ್ ನೀಡಿದ ದೂರಿನ ಆಧಾರದ ಮೇಲೆ ನಹರ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST