LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಸಾಮಾಜಿಕ ಜಾಲತಾಣಗಳಲ್ಲಿ 21 ಲಕ್ಷ ಫಾಲೋವರ್ಸ್ : ಪಂಚಾಯಿತಿ ಚುನಾವಣೆಯಲ್ಲಿ 33 ಮತ

Advertisement

ಸಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 21 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಇನ್‌ಫ್ಲುಯೆನ್ಸರ್‌ ಓಂ ಪ್ರಕಾಶ್ ಬಿಷ್ಣೋಯಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಇವರು ಕೇವಲ 33 ಮತಗಳನ್ನು ಪಡೆದು ಹೀನಾಯವಾಗಿ ಸೋಲನುಭವಿಸಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್, ಮಿಲಿಯನ್‌ಗಟ್ಟಲೆ ವೀವ್ಸ್ ಇದ್ದರೆ ಸಾಕು, ಸಮಾಜದಲ್ಲಿ ದೊಡ್ಡ ಪ್ರಭಾವ ಬೀರಬಹುದು ಎಂದು ಹಲವರು ಭಾವಿಸುತ್ತಾರೆ.

 ಆದರೆ 'ರೀಲ್ ಲೈಫ್' ಬೇರೆ, 'ರಿಯಲ್ ಲೈಫ್' ಬೇರೆ ಎಂಬುದಕ್ಕೆ ರಾಜಸ್ಥಾನದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಡೆದಿರುವ ಈ ಅಚ್ಚರಿಯ ಘಟನೆಯೇ ಸಾಕ್ಷಿ.

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬರೋಬ್ಬರಿ 21 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಜನಪ್ರಿಯ ಇನ್‌ಫ್ಲುಯೆನ್ಸರ್‌ ಒಬ್ಬರು, ತಮ್ಮ ಸ್ವಂತ ಊರಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೇವಲ 33 ಮತಗಳನ್ನು ಪಡೆದು ಹೀನಾಯವಾಗಿ ಸೋಲನುಭವಿಸಿದ್ದಾರೆ! 

ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಒಸಿಯಾ ತಾಲೂಕಿನ 'ಇಂದೋ ಗಟಾ ಕಿ ಧಾಣಿ' ಗ್ರಾಮ ಪಂಚಾಯತಿಯ ಸರಪಂಚ್ (ಗ್ರಾಮ ಪಂಚಾಯತಿ ಅಧ್ಯಕ್ಷ) ಚುನಾವಣೆಗೆ ಸ್ಪರ್ಧಿಸಿದ್ದ ಓಂ ಪ್ರಕಾಶ್ ಬಿಷ್ಣೋಯಿ (Om Prakash Bishnoi) ಎಂಬುವವರೇ ಈ ಮುಖಭಂಗಕ್ಕೊಳಗಾದ ಅಭ್ಯರ್ಥಿ. 

ಇನ್‌ಸ್ಟಾಗ್ರಾಮ್ (Instagram): 14 ಲಕ್ಷಕ್ಕೂ ಅಧಿಕ (1.4 Million) ಫಾಲೋವರ್ಸ್

ಯೂಟ್ಯೂಬ್ (YouTube): ಸುಮಾರು 5 ಲಕ್ಷಕ್ಕೂ ಅಧಿಕ ಚಂದಾದಾರರು (Subscribers)

ಫೇಸ್‌ಬುಕ್ (Facebook): 2.32 ಲಕ್ಷಕ್ಕೂ ಅಧಿಕ ಫಾಲೋವರ್ಸ್

 'ದೈನಿಕ್ ಜಾಗರಣ್' ವರದಿಯ ಪ್ರಕಾರ, ಈ ಗ್ರಾಮ ಪಂಚಾಯತಿಯಲ್ಲಿ ಒಟ್ಟು 1,600 ಮತಗಳು ಚಲಾವಣೆಯಾಗಿದ್ದವು.ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಓಂ ಪ್ರಕಾಶ್ ಬಿಷ್ಣೋಯಿ ಪರವಾಗಿ ಗ್ರಾಮಸ್ಥರು ಮತ ಚಲಾಯಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಮತ ಎಣಿಕೆಯಾದಾಗ ಬಿಷ್ಣೋಯಿ ಕೇವಲ 33 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಬಿಷ್ಣೋಯಿ ಅವರು 'ಮಾದಕ ವಸ್ತು ಮುಕ್ತ ಗ್ರಾಮ' (ನಶಾಮುಕ್ತಿ) ಎಂಬ ಸಾಮಾಜಿಕ ಕಳಕಳಿಯ ವಿಷಯವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಪ್ರಚಾರ ನಡೆಸಿದ್ದರು. ಆದರೂ ಗ್ರಾಮದ ಮತದಾರರು ಇವರ ಮಾತಿಗೆ ಸೊಪ್ಪು ಹಾಕಿಲ್ಲ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST