ಹೈದರಾಬಾದ್ : ಹೈದರಾಬಾದ್ನ ಹಳೆಬಸ್ತಿ (Old City) ಪ್ರದೇಶದಲ್ಲಿ ಅತ್ಯಂತ ಆಘಾತಕಾರಿ (Shocking) ಘಟನೆಯೊಂದು ಬೆಳಕಿಗೆ ಬಂದಿದೆ.
ಕಾಮುಕ ಪತಿಯೊಬ್ಬ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಸ್ವಂತ ಪತ್ನಿಯ ಮೇಲೆಯೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ.ಅಷ್ಟೇ ಅಲ್ಲದೆ ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿ, ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಉದ್ಯೋಗ ಅರಸಿ ಬಂದ ದಂಪತಿ
ಬಾಂಗ್ಲಾದೇಶ ಮೂಲದ 18 ವರ್ಷದ ಯುವತಿಯು ಕಾಶ್ಮೀರದ ಫಯಾಜ್ ಎಂಬಾತನನ್ನು ವಿವಾಹವಾಗಿದ್ದಳು. ಇತ್ತೀಚೆಗೆ ಜೀವನೋಪಾಯಕ್ಕಾಗಿ ಹೈದರಾಬಾದ್ಗೆ ವಲಸೆ ಬಂದಿದ್ದ ಈ ದಂಪತಿ, ನಗರದ ಕಾಂಚನ್ಬಾಗ್ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಮನೆಯಲ್ಲೇ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ
ಮದ್ಯವ್ಯಸನಿಯಾಗಿದ್ದ ಫಯಾಜ್, ತನ್ನ ಸ್ನೇಹಿತರಾದ ಮುಜೀಬ್, ಕಮಲ್ ಮತ್ತು ರೆಹಮಾನ್ ಎಂಬವರೊಂದಿಗೆ ಸೇರಿ ನಿರಂತರವಾಗಿ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದನು.
ಘಟನೆ ನಡೆದ ದಿನ ನಾಲ್ವರೂ ಸೇರಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಆಕೆಯನ್ನು ಅದೇ ಕೋಣೆಯಲ್ಲಿ ಕೂಡಿಹಾಕಿ, ಹೊರಗಿನಿಂದ ಬೀಗ ಜಡಿದು ಅಲ್ಲಿಂದ ಪರಾರಿಯಾಗಿದ್ದಾರೆ.
ಬಾಡಿಗೆ ಹಣವನ್ನು ಪಡೆಯಲು ಮನೆ ಮಾಲೀಕರು ಬಂದಾಗ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ಅನುಮಾನಗೊಂಡು ಬೀಗ ಮುರಿದು ಒಳಗೆ ನೋಡಿದಾಗ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸಂತ್ರಸ್ತೆ ಪತ್ತೆಯಾಗಿದ್ದು, ಇಡೀ ಘಟನೆ ಬೆಳಕಿಗೆ ಬಂದಿದೆ.


