ಬೆಂಗಳೂರು : ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪಿರಿಯ ಪತ್ರಕರ್ತ ಡಿ ಉಮಾಪತಿ, ಸರ್ಕಾರದ ಮೊದಲ ಮಹಿಳಾ ನಿವೃತ್ತ ಮುಖ್ಯ ಕಾರ್ಯದರ್ಶಿ ತೆರೆಸಾ ಭಟ್ಟಾಚಾರ್ಯ, ಅಡ್ವಕೇಟ್ ಜನರಲ್ ಬಿ.ವಿ ಆಚಾರ್ಯ ಸೇರಿದಂತೆ 71 ಮಂದಿ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನವಂಬರ್ 1ರ ಕನ್ನಡ ರಾಜ್ಯೋತ್ಸವದ ದಿನದಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಮತ್ತೆ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತರ ವಿವರ
ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿಗೆ ಅವರು, 2026 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಪ್ರಕಟಣೆ ಮಾಡಿದರು.
ಸಾಹಿತ್ಯ, ಜನಪದ ,ಸಂಗೀತ, ನೃತ್ಯ ಚಲನಚಿತ್ರ, ಯಕ್ಷಗಾನ, ಬಯಲಾಟ, ರಂಗಭೂಮಿ, ಮಾಧ್ಯಮ ,ವಿಜ್ಞಾನ, ಸಮಾಜಸೇವೆ,, ವೈದ್ಯಕೀಯ, ಆಡಳಿತ, ನ್ಯಾಯಾಂಗ ,ಕ್ರೀಡೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸುಮಾರು 71 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ.ಪ್ರಶಸ್ತಿಯು 5 ಲಕ್ಷ ನಗದು, ಹಾಗೂ 25 ಗ್ರಾಂ ಚಿನ್ನ, ಒಳಗೊಂಡಿರುತ್ತದೆ.
71ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಅಷ್ಟೇ ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರು ಯಾವುದೇ ಅರ್ಜಿಗಳನ್ನು ಹಾಕಿರಲಿಲ್ಲ, ಅವರ ಸೇವೆಯನ್ನು ಪರಿಗಣಿಸಿ ಸಮಿತಿಯು ಆಯ್ಕೆ ಮಾಡಿದೆ ಎಂದು ಸಚಿವ ತಂಗಡಿಗೆ ಸ್ಪಷ್ಟಪಡಿಸಿದರು.


