Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನಲ್ಲಿ 2,384 ಕೋಟಿ ರೂ. ನಕಲಿ ಬಿಲ್ಲಿಂಗ್ ದಂಧೆ : ಇಬ್ಬರು ಅರೆಸ್ಟ್ 

Advertisement

ಬೆಂಗಳೂರು : ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆ (ವಿಚಕ್ಷಣಾ ದಳ) ಅಧಿಕಾರಿಗಳು ಬೃಹತ್ ತೆರಿಗೆ ವಂಚನೆಯ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬರೋಬ್ಬರಿ 2,384 ಕೋಟಿ ರೂಪಾಯಿಗಳ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಅಂತರರಾಜ್ಯ ಮಟ್ಟದ ದಂಧೆಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರು ಯಾರು?

ವಾಣಿಜ್ಯ ತೆರಿಗೆ ಇಲಾಖೆಯ ಜಾಲಕ್ಕೆ ಬಿದ್ದಿರುವ ಆರೋಪಿಗಳನ್ನು ಸಲೀಮುಲ್ಲಾ ಬೇಗ್ (59) ಮತ್ತು ಹಸೇನ್ ಬೇಗ್ (35) ಎಂದು ಗುರುತಿಸಲಾಗಿದೆ.

ಇವರು ನಕಲಿ ದಾಖಲೆಗಳನ್ನು ಬಳಸಿ ಅನೇಕ ಸಂಸ್ಥೆಗಳನ್ನು ಸೃಷ್ಟಿಸಿ, ಅವುಗಳ ಮೂಲಕ ವಹಿವಾಟು ನಡೆಸಿದಂತೆ ಬಿಂಬಿಸಿ ಸರ್ಕಾರದಿಂದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು ವಂಚಿಸುತ್ತಿದ್ದರು.

ವಂಚನೆಯ ಜಾಲ ಹೇಗಿತ್ತು?

ಅಧಿಕಾರಿಗಳ ತನಿಖೆಯ ವೇಳೆ ಬರೋಬ್ಬರಿ 127 ನಕಲಿ ಸಂಸ್ಥೆಗಳ ಬೃಹತ್ ಜಾಲ ಪತ್ತೆಯಾಗಿದೆ. ಈ ಪೈಕಿ 72 ಸಂಸ್ಥೆಗಳು ನೇರವಾಗಿ ಸಂಶಯಾಸ್ಪದ ವಹಿವಾಟಿನಲ್ಲಿ ತೊಡಗಿದ್ದವು.

ಸಲೀಮುಲ್ಲಾ ಬೇಗ್: ಈತ ಸುಮಾರು 2172 ಕೋಟಿ ರೂಪಾಯಿಗಳ ನಕಲಿ ವಹಿವಾಟು ತೋರಿಸಿ 382 ಕೋಟಿ ರೂಪಾಯಿಗಳ ನಕಲಿ ITC ಪಡೆದಿದ್ದ.

ಹಸೇನ್ ಬೇಗ್: ಈತ 55 ಸಂಸ್ಥೆಗಳ ಮೂಲಕ 212 ಕೋಟಿ ವಹಿವಾಟು ನಡೆಸಿ 35 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದ.

ಒಟ್ಟಾರೆಯಾಗಿ ಈ ಇಬ್ಬರಿಂದಲೇ ಸುಮಾರು 420 ಕೋಟಿ ರೂಪಾಯಿಗಳ ನಕಲಿ ITC ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST