Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಹಾರದ ಪ್ಲಂಬರ್ ಅಕೌಂಟ್ ಗೆ ಬಂತು 294 ಕೋಟಿ ರೂಪಾಯಿ

Advertisement

ಬಿಹಾರದ ಪ್ಲಂಬರ್ ಒಬ್ಬನಿಗೆ ಸಂಭವಿಸಿದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ದಿನವಹಿ ದುಡಿದರೆ ಮಾತ್ರ ಹೊಟ್ಟೆ ತುಂಬುವ ಸ್ಥಿತಿಯಲ್ಲಿರುವ ಆ ಸಾಮಾನ್ಯ ಕಾರ್ಮಿಕನ ಖಾತೆಗೆ ಅಕಸ್ಮಾತ್ತಾಗಿ ಕೋಟ್ಯಂತರ ರೂಪಾಯಿ ಜಮೆಯಾಗಿದೆ. ಈ ಘಟನೆ ಆತನನ್ನು, ಸ್ಥಳೀಯ ಪೊಲೀಸರನ್ನು ಮತ್ತು ಬ್ಯಾಂಕ್ ಅಧಿಕಾರಿಗಳನ್ನು ದಂಗಾಗಿಸಿದೆ.

ಬಿಹಾರದ ಗಯಾ ಜಿಲ್ಲೆಯ ಮಸ್ತ್‌ಪುರ ಗ್ರಾಮದ ನಿವಾಸಿ ವಿಕಾಶ್ ಕುಮಾರ್ ಎಂಬಾತ ಪ್ಲಂಬಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಬುಧವಾರ ತನ್ನ ಗ್ರಾಹಕರೊಬ್ಬರು ಕಳುಹಿಸಿದ 1,300 ರೂಪಾಯಿ ಹಣವನ್ನು ಎಟಿಎಂ ಮೂಲಕ ಡ್ರಾ ಮಾಡಿದ ನಂತರ, ಆತನ ಖಾತೆಯಲ್ಲಿ ಕೇವಲ 113 ರೂಪಾಯಿ ಮಾತ್ರ ಉಳಿದಿತ್ತು. 

ಆದರೆ, ಗುರುವಾರ ಬೆಳಗ್ಗೆ ಆತನ ಮೊಬೈಲ್‌ಗೆ ಬಂದ ಸಂದೇಶವನ್ನು ನೋಡಿ ವಿಕಾಶ್ ಶಾಕ್ ಆಗಿದ್ದಾರೆ.

ಆತನ ಖಾತೆಯಲ್ಲಿ ಇದ್ದಕ್ಕಿದ್ದಂತೆ 94 ಕೋಟಿ ರೂಪಾಯಿ ಜಮೆಯಾಗಿತ್ತು. ಆ ಅಚ್ಚರಿಯಿಂದ ಹೊರಬರುವಷ್ಟರಲ್ಲೇ, ಸಂಜೆಯ ಹೊತ್ತಿಗೆ ಆ ಮೊತ್ತ ಬರೋಬ್ಬರಿ 294 ಕೋಟಿ ರೂಪಾಯಿಗೆ ಏರಿಕೆಯಾಯಿತು.

ಸಾಮಾನ್ಯವಾಗಿ ಇಷ್ಟು ದೊಡ್ಡ ಮೊತ್ತದ ಹಣ ಖಾತೆಗೆ ಬಂದರೆ ಯಾರಾದರೂ ಸಂಭ್ರಮಿಸುತ್ತಾರೆ. ಆದರೆ ವಿಕಾಶ್ ಕುಮಾರ್ ಮಾತ್ರ ಭಯಭೀತರಾದರು.

ಈ ಹಣ ಎಲ್ಲಿಂದ ಬಂತು ಎಂಬುದು ತಿಳಿಯದೆ ಆತ ಕಂಗಾಲಾದರು. ಆ ಹಣವನ್ನು ಮುಟ್ಟಲೂ ಧೈರ್ಯ ಮಾಡದ ವಿಕಾಶ್, ತಕ್ಷಣವೇ ಗ್ರಾಮದ ಮುಖಂಡರಿಗೆ ವಿಷಯ ತಿಳಿಸಿದರು. ಅವರ ಸಲಹೆಯ ಮೇರೆಗೆ ಬೋಧ್‌ಗಯ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು ಬಿಹಾರದ ಪ್ಲಂಬರ್ ಅಕೌಂಟ್ ಗೆ ಬಂತು 294 ಕೋಟಿ ರೂಪಾಯಿಜಿಪಂ, ತಾಪಂ ಚುನಾವಣೆ : ಕ್ಷಮೆಯಾಚಿಸಿ, 8 ವಾರಗಳ ಹೆಚ್ಚುವರಿ ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ ಪ್ರೇಯಸಿಯ ಅಗಲಿಕೆಯನ್ನು ತಡೆಯಲಾರದೆ, ಆಕೆಯ ಹುಟ್ಟು ಹಬ್ಬದಂದೇ ಯುವಕ ಆತ್ಮಹತ್ಯೆ ಒಂಟಿಯಾದ ಸಿದ್ದರಾಮಯ್ಯ : ಇತ್ತ ನಮಸ್ಕಾರ ಮಾಡಿ ದಾಟಿದ ಡಿ. ಕೆ ಶಿವಕುಮಾರ್ಬೆಂಗಳೂರಲ್ಲಿ ಈಶ್ವರ್ ಖಂಡ್ರೆಗೆ, ಪೂಜ್ಯರಿಂದ ಆಶಿರ್ವಾದ ಅಭಿಮಾನಿಗಳಿಂದ ಗೌರವ ಸನ್ಮಾನಶೀಘ್ರದಲ್ಲೇ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳು : ಗವರ್ನರ್ ಸಂಜಯ್ ಮಲ್ಹೋತ್ರಾ ಜಾಹೀರಾತುನಲ್ಲಿ ಡಿಸಿಎಂ ಫೋಟೋ ಮಾಯಾ : ಜೆಡಿಎಸ್ ಆಕ್ರೋಶ ಬಿಕೆಐಟಿ ಭಾಲ್ಕಿಯಲ್ಲಿ ವಿವೇಚನಾ ಕನ್ಸ್ಟ್ರಕ್ಷನ್ಸ್ ವತಿಯಿಂದ ಕ್ಯಾಂಪಸ್ ನೇಮಕಾತಿ ಅಭಿಯಾನಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ : ತಿಂಗಳಿಗೆ 67600 ಸಂಬಳ