ಐನಾಪೂರಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಯುವಕನನ್ನು ಕಲ್ಲಿನಿಂದ ತಲೆಜಜ್ಜಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಐನಾಪುರ : ಪಟ್ಟಣದ ಸಂತೋಶ ಸಿದ್ದಪ್ಪ ಕಮತೆ ಎಂಬ 33 ವರುಷದ ಯುವಕ ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ.
ಘಟನೆಯ ಹಿನ್ನೆಲೆ: ಸಂತೋಷ್ ಕಮತೆ ಅವರ ತೋಟದಲ್ಲಿ ಇದ್ದ ತೆಂಗಿನ ಮರಗಳಿಂದ ತೆಂಗಿನ ಕಾಯಿ ಕಿತ್ತು, ತನ್ನ ಇಬ್ಬರು ಗೆಳೆಯರೊಂದಿಗೆ ಉಗಾರ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದರು. ಬಳಿಕ ಮೂವರೂ ಸೇರಿ ಬಾರ್ ನಲ್ಲಿ ಮದ್ಯಪಾನ ಮಾಡಿ ಐನಾಪುರಕ್ಕೆ ಹಿಂದಿರುಗುವ ವೇಳೆ, ಮಾರಾಟವಾದಹಣದಬಟವಾಡೆವಿಚಾರವಾಗಿ ವಾದ ವಿವಾದ ಆರಂಭಗೊಂಡಿದೆ.
ಈ ವೇಳೆ ಉಳಿದ ಇಬ್ಬರು ಗೆಳೆಯರು ಸಂತೋಷ ಮೇಲೆ ಹಲ್ಲೆ ನಡೆಸಿ, ಬಳಿಕ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಬೆಳಗಾವಿಯಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ ಹಾಗೂ ಪಿಎಸ್‌ಐ ರಾಘವೇಂದ್ರ ಖೋತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಈ ಕೊಲೆ ಘಟನೆ ಐನಾಪುರ ಹಾಗೂ ಉಗಾರ ಪರಿಸರದಲ್ಲಿ ದಿನವಿಡೀ ಆತಂಕದ ವಾತಾವರಣ ಸೃಷ್ಟಿಸಿದೆ.
ವರದಿ :ಮುರಗೇಶ ಗಸ್ತಿ

