ಬೆಂಗಳೂರು : ಹಿರಿಯ ಗಾಯಕಿ ಗಾನಕೋಗಿಲೆ ಎಸ್ ಜಾನಕಿ (88) ಅವರು ನಿನ್ನೆ ಹೃದಯಾಘಾತದಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಎಸ್ ಜಾನಕಿ ಅವರಲ್ಲಿ ನಿಧನಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಸಂತಾಪ ಸೂಚಿಸಿದ್ದು, ಇಂದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಸ್.ಜಾನಕಿ ಅವರ ಅಂತಿಮ ದರ್ಶನ ಪಡೆದರು. ಗಾನಕೋಗಿಲೆ ಎಸ್ ಜಾನಕಿ ಅವರ ಸ್ಮಾರಕ ನಿರ್ಮಿಸಬೇಕು ಎಂದು ತಿಳಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರುನಾಡು, ಮೈಸೂರು ಮಣ್ಣಿನಲ್ಲಿ ಅವರು ವಿಧಿವಶರಾಗಿದ್ದಾರೆ. ಎಸ್ ಜಾನಕಿ ಅವರ ಆಸೆ ಕರುನಾಡಲ್ಲಿ ಇರುವುದಾಗಿತ್ತು.
ಅದಕ್ಕೆ ಇಂಬು ಕೊಡುವ ಕೆಲಸ ನಾವು ಮಾಡಬೇಕು. ಸರ್ಕಾರಕ್ಕೆ ಇದನ್ನು ತಿಳಿಸಿ ಈಗಲೇ ಸ್ಮಾರಕಕ್ಕೆ ಜಾಗ ನಿಗದಿ ಮಾಡಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾಗೆ ವಿಡಿಯೋ ಮೂಲಕ ಹಂಸಲೇಖ ಅವರು ಮನವಿ ಮಾಡಿದ್ದಾರೆ.


