Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೈಲಿನಲ್ಲಿದ್ದರೂ ಸಹ ತನ್ನ ಸ್ವಂತ ಆಸ್ತಿಯನ್ನು ಮಾರಾಟ ಮಾಡಲು ಅವಕಾಶವಿದೆ : ಹೈಕೋರ್ಟ್ 

Advertisement

ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿರುವ ವ್ಯಕ್ತಿಯ ಆಸ್ತಿ ಹಕ್ಕುಗಳು ಯಾವುದೇ ಕಾರಣಕ್ಕೂ ಮೊಟಕುಗೊಳ್ಳುವುದಿಲ್ಲ. ಆತ ಜೈಲಿನಲ್ಲಿದ್ದರೂ ಸಹ ತನ್ನ ಸ್ವಂತ ಆಸ್ತಿಯನ್ನು ಮಾರಾಟ ಮಾಡಲು ಮತ್ತು ನೋಂದಣಿ (ರಿಜಿಸ್ಟ್ರೇಷನ್) ಮಾಡಿಕೊಡಲು ಕಾನೂನುಬದ್ಧವಾಗಿ ಸಂಪೂರ್ಣ ಅವಕಾಶವಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ಧಾರವಾಡದ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಕಮಲಾಪುರ ಗ್ರಾಮದ ನಿವಾಸಿ ಬಸವರಾಜು ಎಂಬುವವರು ತಮ್ಮ ಮಾಲೀಕತ್ವದ 22 ಗುಂಟೆ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದರು. 

ಆದರೆ, ಜೈಲಿನಲ್ಲಿದ್ದ ಕಾರಣ ಅವರಿಗೆ ಖುದ್ದಾಗಿ ಉಪನೋಂದಣಾಧಿಕಾರಿಗಳ (ಸಬ್ ರಿಜಿಸ್ಟ್ರಾರ್) ಕಚೇರಿಗೆ ತೆರಳಿ ಜಮೀನಿನ ಕ್ರಯಪತ್ರಕ್ಕೆ ಸಹಿ ಹಾಕಲು ಸಾಧ್ಯವಾಗಿರಲಿಲ್ಲ.

ಜೈಲಧಿಕಾರಿಗಳ ಅಸಹಕಾರ: ಈ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಾಗಿ ಉಪನೋಂದಣಾಧಿಕಾರಿಗಳೇ ಖುದ್ದಾಗಿ ಜೈಲಿಗೆ ಬರಲು ಒಪ್ಪಿಗೆ ಸೂಚಿಸಿದ್ದರು. 

ಆದರೆ, ಇದಕ್ಕೆ ಸಂಬಂಧಪಟ್ಟ ಜೈಲಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿರಲಿಲ್ಲ ಹಾಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲು ನಿರಾಕರಿಸಿದ್ದರು. ಜೈಲಧಿಕಾರಿಗಳ ಈ ಧೋರಣೆಯಿಂದ ಬೇಸತ್ತ ಕೈದಿ ಬಸವರಾಜು, ನ್ಯಾಯ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡೆಲ್ಟಾ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ : ತಪ್ಪಿಸಿ ಹೋದರೆ ಜೈಲು ಫಿಕ್ಸ್ ಅನಾಥ ಯುವತಿ ಬಾಳಿಗೆ ಬೆಳಕಾದ ಹಾರೂಗೇರಿ ಯುವಕ ಜೈಲಿನಲ್ಲಿದ್ದರೂ ಸಹ ತನ್ನ ಸ್ವಂತ ಆಸ್ತಿಯನ್ನು ಮಾರಾಟ ಮಾಡಲು ಅವಕಾಶವಿದೆ : ಹೈಕೋರ್ಟ್ ಹೆದರಿಸಿ ಹಣ ವಸೂಲಿ ಮಾಡಿದ್ದರೇ ರೌಡಿಶೀಟ್ ಫಿಕ್ಸ್ : ನಕಲಿ ಯುಟ್ಯೂಬರ್ ಗಳಿಗೆ ಬೆಳಗಾವಿ ಎಸ್ಪಿ ಎಚ್ಚರಿಕೆ ಇಂಗ್ಲೆAಡ್‌ಗೆ ೧೯೧ ರನ್‌ಗಳ ಗೆಲುವಿನ ಗುರಿಬೆಂಗಳೂರು ಮೂಲದ ಗೌರಿ ಜೊತೆ ನಾಳೆ ಅಮೀರ್ ಖಾನ್ ವಿವಾಹ ಜುಲೈ 20 ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಮಹಾರಾಷ್ಟ್ರದಲ್ಲಿ ಮಳೆ : ಕೃಷ್ಣಾ ನದಿಗೆ ಹರಿದು ಬಂತು 15 ಸಾವಿರ ಕ್ಯೂಸೆಕ್ ನೀರು ಜುಲೈ 6ರಿಂದ ಮೋದಿಯಿಂದ ಇಂಡೋನೇಷ್ಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಪ್ರವಾಸಆರ್ಥಿಕ ಸಂಕಷ್ಟವನ್ನು ಎದುರಿಸಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ