ಬಾಗಲಕೋಟೆ: ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಹುಟ್ಟು ಕುರುಡಿಯಾಗಿದ್ದ ಯುವತಿಯ ಬಾಳಿಗೆ ಬೆಳಕಾದ ವ್ಯಕ್ತಿಯೊಬ್ಬರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿರುವುದು ಇಲಕಲ್ಲ ನಗರದ ಅಂಬಾಭವಾನಿ ಇಳಕಲ್ಲ ನಗರದ ಅಂಧ ಯುವತಿ ಹುಲಿಗೆಮ್ಮ ತಿಪ್ಪಣಸಾ ರಾಯಬಾಗಿ ಎಂಬ ಯುವತಿ ಕೈಹಿಡಿದು ಆಕೆಯೆ ಬಾಳಿಗೆ ಬೆಳಕಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ಮೂಲದ ನಾಗರಾಜ ಪರಶುರಾಮಸಾ ಖೋಡೆ.
ಇತನಿಗೂ ತಂದೆ -ತಾಯಿ ಇಲ್ಲದ ಅನಾಥನಾಗಿದ್ದ. ಅಲ್ಲಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹಾಗೇ ಆತನ ಸ್ನೇಹಿತರಿಂದ ಹುಲಿಗೆಮ್ಮಳ ಬಗ್ಗೆ ಹೇಳಿದ್ದ ಆಕೆ ಕುರುಡಿಯಾಗಿದ್ದರೂ ಆಕೆಗೆ ಬಾಳು ಕೊಡಯವುದಾಗಿ ಹೇಳಿ ಸಾರ್ವಜನಿಕರ ಸಮ್ಮುಖದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.


